ಸಿನಿ ಜರ್ನಿಗೆ 26 ವರ್ಷ: ಪತ್ನಿಗೆ ಧನ್ಯವಾದ ಸಲ್ಲಿಸಿದ ಕಿಚ್ಚ ಸುದೀಪ್
ಅದರಲ್ಲೂ ವಿಶೇಷವಾಗಿ ಪತ್ನಿ ಪ್ರಿಯಾ ಶುಭ ಕೋರಿದ್ದು, ಈ 26 ವರ್ಷಗಳಲ್ಲಿ ನೀವು ಗಳಿಸಿದ ಪ್ರೀತಿ, ಗೌರವದ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ನನ್ನ ಪ್ರತಿ ಹೆಜ್ಜೆಯಲ್ಲೂ ನೀನು ಶಕ್ತಿಯಾಗಿ ಜೊತೆ ನಿಂತಿರುವೆ. ನೀನು ಮಾಡಿದ ಎಲ್ಲಾ ತ್ಯಾಗಕ್ಕೂ ಧನ್ಯವಾದಗಳು ಎಂದಿದ್ದಾರೆ.
ಇನ್ನು, ಸುದೀಪ್ ಸಿನಿ ಜರ್ನಿಗೆ 26 ವರ್ಷ ತುಂಬಿದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ವಿಶೇಷ ಸಿಡಿಪಿ ಮೂಲಕ ಶುಭ ಕೋರಿದ್ದಾರೆ. ತಮಗೆ ಶುಭ ಕೋರಿದ ಎಲ್ಲರಿಗೂ ಸುದೀಪ್ ಧನ್ಯವಾದ ಸಲ್ಲಿಸಿದ್ದಾರೆ.