ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

Sampriya

ಮಂಗಳವಾರ, 21 ಅಕ್ಟೋಬರ್ 2025 (14:06 IST)
Photo Credit X
ಬೆಂಗಳೂರು: ಕಿಚ್ಚ ಸುದೀಪ್‌ ನಿರೂಪನೆಯ ಜನಪ್ರಿಯಾ ರಿಯಾಲಿಟಿ ಶೋ ಬಿಗ್‌ಬಾಸ್‌ 12ನೇ ಅವೃತ್ತಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಒಂದೆಡೆ ಸ್ಪರ್ಧಿಗಳು ಮನರಂಜನೆ ನೀಡುತ್ತಿದ್ದರೆ, ಮತ್ತೊಂದೆಡೆ ಎಲಿಮಿನೇಷನ್‌ ಬಿಸಿ ಅನುಭವಿಸುತ್ತಿದ್ದಾರೆ. 

ನಾಲ್ಕು ವಾರಗಳಲ್ಲಿ ಬಿಗ್‌ಬಾಸ್‌ ಮನೆಯಿಂದ ಐದು ಸ್ಪರ್ಧಿಗಳು ಹೊರ ಹೋಗಿದ್ದಾರೆ. ಹಾಗೆಯೇ ಭಾನುವಾರದ ಸಂಚಿಕೆಯಲ್ಲಿ ಒಂದೇ ದಿನಕ್ಕೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಪ್ರವೇಶ ಮಾಡಿದ್ದಾರೆ.

ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಘು, ರಿಷಾ ಹಾಗೂ ಸೂರಜ್ ಸಿಂಗ್ ಬಿಗ್‌ಬಾಸ್‌ ಮನೆಗೆ ರೆಬೆಲ್ ಆಗಿಯೇ ಎಂಟ್ರಿ ಕೊಟ್ಟಿದ್ದಾರೆ. ಅವರು ಆಗಮಿಸುತ್ತಿದ್ದಂತೆ ಮನೆಯ ವಾತಾವರಣವೇ ಬದಲಾಗಿದೆ. 

ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಅವರ ವಿರುದ್ಧ ಅಶ್ವಿನಿ ಗೌಡ ಹಾಗೂ ಜಾಹ್ನವಿ ಮುಗಿಬಿದ್ದಿದ್ದರು. ಈಗ ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿ ಅವರು ನಾಮಿನೇಷನ್‌ ವಿಚಾರದಲ್ಲಿ ಜಗಳಕ್ಕೆ ಇಳಿದಿದ್ದಾರೆ.

ಈ ಕುರಿತ ಪ್ರೊಮೋ ಒಂದನ್ನು ಕಲರ್ಸ್‌ ಕನ್ನಡ ಇಂದು ಬಿಡುಗಡೆ ಮಾಡಿದೆ. ಅದರಲ್ಲಿ ರಾಶಿಕಾ ಹಾಗೂ ರಕ್ಷಿತಾ ನಾಮಿನೇಷನ್ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಇಂದು ರಾತ್ರಿ ಈ ಎಪಿಸೋಡ್‌ ಪ್ರಸಾರವಾಗಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ