ಇದೀಗ ಕಿಚ್ಚ ಸುದೀಪ್ ಅಂಬಿ ಮಾಮನ ನೆನೆಸಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ತಂದೆಯ ಜತೆಗೆ ಅಂಬರೀಶ್ ಇರುವ 35
ವರ್ಷಗಳ ಹಿಂದಿನ ಫೋಟೋ ಪ್ರಕಟಿಸಿರುವ ಕಿಚ್ಚ, ಮಾಮನಿಗೆ ಆಗ 31 ವರ್ಷವಾಗಿರಬೇಕು. ಎಷ್ಟು ಬೇಗ ಅವರಿಗೆ 66 ವರ್ಷವಾಯಿತು. ಎಷ್ಟು ಬೇಗ ಅವರು ನಮ್ಮನ್ನು ಬಿಟ್ಟು ಹೋದರು. ನನಗೆ ಈಗಲೂ ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸುದೀಪ್ ಭಾವುಕರಾಗಿ ಬರೆದುಕೊಂಡಿದ್ದಾರೆ.