ಅಂಬರೀಶ್ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಕುಟುಂಬದವರಿಗೆ ಸಾಥ್ ನೀಡಿದ ರಾಕ್ ಲೈನ್, ದರ್ಶನ್
ಅಂಬರೀಶ್ ನಿಧನರಾದ ಸುದ್ದಿ ತಿಳಿದಾಗಿನಿಂದಲೂ ಅಂಬಿ ಕುಟುಂಬದ ಜತೆಗೇ ಇದ್ದ ರಾಕ್ ಲೈನ್ ವೆಂಕಟೇಶ್ ಇಂದೂ ಕೂಡಾ ಕುಟುಂಬದವರ ಜತೆಗೇ ಆಗಮಿಸಿ ಅಸ್ಥಿ ಸಂಗ್ರಹ ಕಾರ್ಯಕ್ಕೆ ನೆರವಾದರು. ಕೊಂಚ ತಡವಾಗಿ ಆಗಮಿಸಿದ ದರ್ಶನ್ ಕೂಡಾ ಬಳಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮೊನ್ನೆಯಿಂದ ಸಕ್ರಿಯರಾಗಿದ್ದ ರಾಕಿಂಗ್ ಸ್ಟಾರ್ ಯಶ್ ಇಂದು ಆಗಮಿಸಿರಲಿಲ್ಲ.