ಕಿಚ್ಚ ಸುದೀಪ್ ಗೆ ಅನಾರೋಗ್ಯ: ಈ ವಾರ ಬಿಗ್ ಬಾಸ್ ನಡೆಸೋರ್ಯಾರು?

ಶನಿವಾರ, 17 ಏಪ್ರಿಲ್ 2021 (09:24 IST)
ಬೆಂಗಳೂರು: ನಟ ಕಿಚ್ಚ ಸುದೀಪ್ ಈ ವಾರಂತ್ಯದ ಬಿಗ್ ಬಾಸ್ ಶೋನಲ್ಲಿ ಭಾಗಿಯಾಗುತ್ತಿಲ್ಲ. ಕಾರಣ, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.


ಆದರೆ ಅವರ ಸ್ಥಾನದಲ್ಲಿ ಬಿಗ್ ಬಾಸ್ ಕನ್ನಡ ಶೋ ನಡೆಸಿಕೊಡುವವರು ಯಾರು ಎಂಬ ಕುತೂಹಲ ವೀಕ್ಷಕರ ಜೊತೆಗೆ ಸ್ವತಃ ಕಿಚ್ಚ ಸುದೀಪ್ ಗಿದೆಯಂತೆ. ತಮ್ಮ ಅನಾರೋಗ್ಯದ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿರುವ ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ಶೋನಲ್ಲಿ ನಾನಿರಲ್ಲ ಎಂದಿದ್ದಾರೆ.

ಜೊತೆಗೆ ನನ್ನ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಶೋವನ್ನು ಕ್ರಿಯೇಟಿವ್ ಟೀಂ ಹೇಗೆ ಕ್ರಿಯೇಟಿವ್ ಆಗಿ ಮಾಡಲಿದೆ ಎಂಬ ಕುತೂಹಲವಿದೆ ಎಂದಿದ್ದಾರೆ. ಸುದೀಪ್ ಅನುಪಸ್ಥಿತಿಯಲ್ಲಿ ಬೇರೊಬ್ಬ ಸ್ಟಾರ್ ನಟನನ್ನು ಅತಿಥಿಯಾಗಿ ಕರೆತರುತ್ತಾರೋ ಕಾದುನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ