ನಾಗಿಣಿ 2 ಧಾರವಾಹಿ ನಾಯಕ-ನಾಯಕಿಗೆ ನಿಜವಾಗಿಯೂ ಮದ್ವೆನಾ?!

ಭಾನುವಾರ, 11 ಏಪ್ರಿಲ್ 2021 (09:34 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರವಾಹಿಯ ನಾಯಕ ಮತ್ತು ನಾಯಕಿ ಪಾತ್ರಧಾರಿಗೆ ನಿಜವಾಗಿಯೂ ಮದುವೆಯಾಯ್ತಾ? ಹೀಗೊಂದು ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.


ಇದಕ್ಕೆ ಕಾರಣ ಧಾರವಾಹಿಯಲ್ಲಿ ಇತ್ತೀಚೆಗೆ ನಾಯಕ ತ್ರಿಶೂಲ್ ಮತ್ತು ನಾಯಕಿ ಶಿವಾನಿ ಮದುವೆಯಾಗಿತ್ತು. ಇದೀಗ ದಾವಣಗೆರೆಯಲ್ಲಿ ಇಬ್ಬರ ಮದುವೆ ರಿಸೆಪ್ಷನ್ ಶೂಟಿಂಗ್ ಮಾಡಲಾಗಿದೆ.

ಆದರೆ ಈ ರಿಸೆಪ್ಷನ್ ನೋಡಿದ ಅಭಿಮಾನಿಗಳು ಇದು ನಿಜವಾದ ಮದುವೆಯೇನೋ ಎಂದು ಅಚ್ಚರಿಪಟ್ಟಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಇವರು ನಿಜವಾಗಿಯೂ ಮದುವೆಯಾದರೇ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಅಸಲಿಗೆ ಇದು ರೀಲ್ ಮದುವೆ, ರಿಯಲ್ ಮದುವೆಯಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ