ರವಿಮಾಮ, ಅಪೂರ್ವ ಜೊತೆಯಾದ ಕಿಚ್ಚ ಸುದೀಪ್

ಬುಧವಾರ, 28 ಜನವರಿ 2015 (10:45 IST)
ನಿನ್ನೆ ನಿಮಗೆ ವಿ ರವಿಚಂದ್ರನ್   ಅವರ ಬಹು ನಿರೀಕ್ಷೆಯ ಅವರದ್ದೇ ಅದ ವಿಭಿನ್ನ ಶೈಲಿಯ   ಸಿನಿಮಾ ಅಪೂರ್ವ ಚಿತ್ರದ ಬಗ್ಗೆ ಹೇಳಿದ್ದೆವು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಬಾರಿ ಲಿಫ್ಟ್ ಗೆ ಜೀವ ತುಂಬುತ್ತಿದ್ದಾರೆ. ಈ ಸಂಗತಿಯ ಬಗ್ಗೆಯೂ ಸಹಿತ ತಿಳಿಸಿದ್ದೆವು. ಈಗ ಬಂದಿರುವ ಸುದ್ದಿ ಅನ್ವಯ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸಹಿತ ಅಭಿನಯಿಸುತ್ತಿದ್ದಾರೆ. 
ಮಾಣಿಕ್ಯ ಚಿತ್ರದಲ್ಲಿ ತಂದೆ ಮಗನ ಪಾತ್ರಧಾರಿಗಳಾಗಿದ್ದ ಕಿಚ್ಚ ಮತ್ತು ರವಿಮಾಮ ಇಲ್ಲಿ ಏನಾಗುತ್ತಾರೆ ಎನ್ನುವುದು ಗೊತ್ತಿಲ್ಲವಾದರೂ ಒಟ್ಟಿಗೆ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಸತ್ಯ. ಈ ಚಿತ್ರದಲ್ಲಿ ಅನೇಕ ಅಚ್ಚರಿಗಳಿವೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ್ದರು, ಅದರಂತೆ ಈಗ ತಿಳಿದು ಬಂದ ಸಂಗತಿ ಎಂದರೆ ಕಿಚ್ಚ ಮತ್ತೆ ರವಿಮಾಮ ಜೊತೆಯಾಗಿದ್ದಾರೆ. 
 
ಈ ಸಿನಿಮಾದಲ್ಲಿ 61  ರ ಹರೆಯ ವ್ಯಕ್ತಿಗೆ 19  ರ ಹರೆಯ ಯುವತಿ ಜೊತೆ ಪ್ರೀತಿ ಆಗುತ್ತದೆ. ಇದರಲ್ಲಿ ನಟ ವಿಜಯ್ ರಾಘವೇಂದ್ರ ಮತ್ತು ಅವರ ಪತ್ನಿ ಸ್ಪಂದನ ರವಿ ಮಾಮ ಅವರ ಮಗ ಸೊಸೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಅಪೂರ್ವ ಕನ್ನಡ ಚಿತ್ರರಂಗದ  ನವನವೀನ ಪ್ರತಿಭೆ. ಆಕೆಯನ್ನು ಇನ್ನು ಮಾಧ್ಯಮಗಳ ಮುಂದೆ ತಂದಿಲ್ಲ ರವಿಚಂದ್ರನ್. 

ವೆಬ್ದುನಿಯಾವನ್ನು ಓದಿ