ಕಿಚ್ಚ ಸುದೀಪ್ ಮಗಳಿಗೆ ಪಾಪ ಏನು ಕಷ್ಟವೋ ಹರಿದು ಬಟ್ಟೆ ಹಾಕ್ತಾರೆ

Sampriya

ಶನಿವಾರ, 4 ಜನವರಿ 2025 (20:33 IST)
Photo Courtesy X
ಈ ವಾರ ಜೀ ಕನ್ನಡದಲ್ಲಿ ನ್ಯೂ ಇಯರ್ ಸೆಲೆಬ್ರೇಶನ್ ವಿತ್‌ ಕಿಚ್ಚ ಸುದೀಪ್‌ ಎಪಿಸೋಡ್‌ ಪ್ರಸಾರವಾಗುತ್ತಿದೆ. ಸುದೀಪ್ ಅವರ ಸಿನಿಮಾದ ಹಾಡುಗಳನ್ನು ಸ್ಪರ್ಧಿಗಳು ಈ ವಾರ ಹಾಡುತ್ತಿದ್ದಾರೆ.

ಇದೀಗ ಸುದೀಪ್‌ಗೆ ಸರ್ಪ್ರೈಸ್‌ ಆಗಿ ಮಗಳು ಸಾನ್ವಿ ಅವರು ಶೋಗೆ ಎಂಟ್ರಿಕೊಟ್ಟಿದ್ದಾರೆ. ಮಗಳ ಬರುವಿಕೆ ನೋಡಿ ಸುದೀಪ್‌ ಶಾಕ್ ಆಗಿದ್ದಾರೆ. ಅದಲ್ಲದೆ ಅಪ್ಪನಿಗಾಗಿ ಸಾನ್ವಿ ಅವರು ಜಸ್ಟ್‌ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ.

ಜೀ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸಾನ್ವಿ ಅವರ ಹಾಡು ಹಾಗೂ ಮಗಳ ಬಗ್ಗೆ ಸುದೀಪ್ ಮಾತು ಪ್ರಸಾರವಾಗಿದೆ.

ಈ ಶೋಗೆ ಸಾನ್ವಿ  ಸ್ಟೈಲಿಶ್ ಹರಿದ ಜೀನ್ಸ್‌ ಅನ್ನು ಧರಿಸಿ ಬಂದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಪಾಪ ಸುದೀಪ್ ಮಗಳಿಗೆ ಏನು ಕಷ್ಟವೋ, ಹರಿದ ಬಟ್ಟೆ ಹಾಕ್ತಾರೆ.

ಮತ್ತೊಬ್ಬರು ಇಂತಹ ದೊಡ್ಡ ವೇದಿಕೆಗೆ ಬಂದಾಗ ಒಂದೊಳ್ಳೆ ವಸ್ತ್ರ ಸಂಹಿತೆ ಬಗ್ಗೆ ಮಾಹಿತಿ ಇದ್ದರೆ ಒಳ್ಳೆಯದು ಎಂದು ಸಾನ್ವಿ ಡ್ರೆಸ್‌ ಸೆನ್ಸ್‌ ಬಗ್ಗೆ ಮಾತನಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ