ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ ಶಿವಣ್ಣನ 'ಕಿಲ್ಲಿಂಗ್ ವೀರಪ್ಪನ್' ಫೋಟೋ

ಶನಿವಾರ, 25 ಏಪ್ರಿಲ್ 2015 (09:49 IST)
ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಹಾಗೂ ವಿವಾದಿತ ರಾಮ್ ಗೋಪಾಲ್ ವರ್ಮಾ ಅವರು ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಹಾಕಿಕೊಂಡು ಸಿನಿಮಾವನ್ನು ತಯಾರು ಮಾಡುತ್ತಿದ್ದಾರೆ ಎನ್ನುವ ಸುದ್ದಿ ನಿಮಗೆ ಈ ಮೊದಲು ಹೇಳಿದ್ದೆವು. ಈಗ ಆ ಚಿತ್ರದ ಕೆಲಸಗಳು ಭರದಿಂದ ಸಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಶಿವರಾಜ್ ಕುಮಾರ್ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ.
ಹಾಗಂತ ಟ್ವೀಟ್ ಮಾಡಿ ಹೇಳಿದ್ದಾರೆ ರಾಮ್ ಗೋಪಾಲ್ ವರ್ಮಾ. ಜೊತೆಗೆ ಶಿವಣ್ಣನ ಹೊಚ್ಚ ಹೊಸ ಚಿತ್ರವನ್ನು ಸಹಿತ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ವೀರಪ್ಪನ್ ಬಗ್ಗೆ ಯಾರಿಗೂ ಗೊತ್ತಿಲ್ಲದೇ ಇರುವ ಸಂಗತಿ ತಮಗೆ ತಿಳಿದಿದ್ದು, ಅದನ್ನು ತಾವು ಈ ಚಿತ್ರದ ಮೂಲಕ ಅನಾವರಣ ಮಾಡುವುದಾಗಿ ಹೇಳಿದ್ದಲ್ಲದೆ, ವೀರಪ್ಪನ್ ಒಂದು ಕ್ರೂರ ಕೊಲೆಗಾರ ಎಂದು ಸಹಿತ ತಿಳಿಸಿದ್ದಾರೆ. 
 
ಶಿವರಾಜ್ ಕುಮಾರ್ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಕಷ್ಟಪಟ್ಟು ಕೆಲಸ ಮಾಡುತ್ತಾ ತಮ್ಮನ್ನು ತೊಡಗಿಸಿಕೊಂಡಿದ್ದಾರಂತೆ. ಕಿಲ್ಲಿಂಗ್ ವೀರಪ್ಪನ್ ಎನ್ನುವ ಶೀರ್ಷಿಕೆಯನ್ನು ಹೊಂದಿರುವ ಈ ಸಿನಿಮಾಗೆ ಸಂಬಂಧಪಟ್ಟಂತೆ ರಾಮ್ ಗೋಪಾಲ್ ವರ್ಮ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಶಿವಣ್ಣ ಕಾಫಿ ಮಗ್ ಹಿಡಿದು ಫೈಲ್ ನೋಡುತ್ತಿರುವುದು ಕಂಡು ಬರುತ್ತಿದೆ.  
 
ಈ ಚಿತ್ರದ ಪೋಸ್ಟರ್ ಕುತಂತ್ರ, ದುಷ್ಟ, ಪ್ರತಿಭೆ, ದ್ರೋಹ ಹಾಗೂ ಸ್ನೇಹ ಎನ್ನುವಂತಹ ಅಂಶವನ್ನು ವಿವರಿಸುತ್ತದೆ. ಒಟ್ಟಾರೆ ಶಿವಣ್ಣನ ಅಭಿಮಾನಿಗಳು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಯಾವಾಗ ಇದು ಬಿಡುಗಡೆಯಾಗುತ್ತದೆಯೋ ಎಂದು ಕಾತುರದಿಂದ ಕಾಯುತ್ತಿದ್ದಾರೆ.  

ವೆಬ್ದುನಿಯಾವನ್ನು ಓದಿ