ಐಶ್ವರ್ಯ ಮೆನನ್, ಅನಶ್ವರ ಕುಮಾರ್, ಗಾಯತ್ರಿ ಅಯ್ಯರ್, ನಿಖಿತ ತುಕ್ರಾಲ್ ಇವರೇ ಆ ನಾಲ್ಕು ಜನರು. ಈ ಚಿತ್ರದಲ್ಲಿ ದಲೇರ್ ಮೆಹಂದಿ ಮತ್ತು ಕೋಮಲ್ ಕುಮಾರ್ ಹಾಡಿರುವ ಹಾಡುಗಳು ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಕೊರಿಯಾಗ್ರಾಫರ್ ಮುರಳಿ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಕರ ಸ್ಥಾನ ಹಿಡಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಅವರು ಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಭೂತ ಇದೆಯೇ ಇಲ್ಲವೇ ಎನ್ನುವುದರ ಅಡಿಯಲ್ಲಿ ಚಿತ್ರ ನಿರ್ಮಿತ ಗೊಂಡಿದೆ.