ಕೋಟಿಗೊಬ್ಬ 3 ಟೀಸರ್ ಡಿಲೀಟ್ ಪ್ರಕರಣ: ಕಾನೂನು ಸಮರಕ್ಕೆ ಮುಂದಾದ ಚಿತ್ರತಂಡ

ಮಂಗಳವಾರ, 10 ಮಾರ್ಚ್ 2020 (10:29 IST)
ಬೆಂಗಳೂರು: ಯೂ ಟ್ಯೂಬ್ ನಿಂದ ಬೇಕೆಂದೇ ಕೋಟಿಗೊಬ್ಬ 3 ಸಿನಿಮಾ ಟೀಸರ್ ಡಿಲೀಟ್ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.


ಚಿತ್ರತಂಡ ಬಾಕಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪೊಲ್ಯಾಂಡ್ ನಲ್ಲಿ ಚಿತ್ರೀಕರಣ ಮಾಡಿದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್ ನೇತೃತ್ವದ ಕಂಪನಿ ಬೇಕೆಂದೇ ಟೀಸರ್ ಡಿಲೀಟ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಬು ಈಗಾಗಲೇ ನಿಗದಿಯಾದ ಹಣ ಪಾವತಿಸಿದರೂ ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರಿಗೂ ದೂರು ನೀಡಿದ್ದೇವೆ ಎಂದಿದ್ದಾರೆ.

ಈ ಕುರಿತಂತೆ ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡುವುದಾಗಿ ಹೇಳಿರುವ ಸೂರಪ್ಪ ಬಾಬು ಸದ್ಯದಲ್ಲೇ ಟೀಸರ್ ಪ್ರಕಟಿಸುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ