ಚಾಲೆಂಜಿಂಗ್ ಸ್ಟಾರ್ ಕುರುಕ್ಷೇತ್ರ ಬಿಡುಗಡೆ ದಿನಾಂಕ ಬದಲಾಯ್ತು

ಗುರುವಾರ, 4 ಜುಲೈ 2019 (09:31 IST)
ಬೆಂಗಳೂರು: ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಬಿಡುಗಡೆ ದಿನಾಂಕ ಈಗ ಬದಲಾಗಿದೆ. ಬಹುತಾರಾಗಣವಿರುವ ಈ ಸಿನಿಮಾ ಅಡಿಯೋ ರಿಲೀಸ್ ಜುಲೈ 7 ರಂದು ಅದ್ಧೂರಿಯಾಗಿ ನಡೆಯಲಿದೆ.


ಈ ಮೊದಲು ಸಿನಿಮಾವನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಅಂದರೆ ಅಗಸ್ಟ್ 9 ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಆದರೆ ಇದೀಗ ಒಂದು ವಾರ ಮೊದಲೇ ಅಂದರೆ ಆಗಸ್ಟ್ 2 ರಂದೇ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿರುವ ಕುರುಕ್ಷೇತ್ರ ಭಾರತದ ಮೊದಲ 3 ಡಿ ಪೌರಾಣಿಕ ಸಿನಿಮಾ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೊದಲು ಸುದೀಪ್ ಅಭಿನಯ ಪೈಲ್ವಾನ್ ಮತ್ತು ಕುರುಕ್ಷೇತ್ರ ಒಂದೇ ಸಮಯದಲ್ಲಿ ಬಿಡುಗಡೆಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಇದೀಗ ಕುರುಕ್ಷೇತ್ರ ಮೊದಲೇ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ