ಕನ್ನಡ ಚಿತ್ರರಂಗದ 6 ಅಡಿ ಬೂಲೇಟ್ ಅಂತೆಲ್ಲಾ ಕರೆಸಿಕೊಳ್ಳೋ ಕಿಚ್ಚ ಸುದೀಪ ರಾಜಕೀಯಕ್ಕೆ ಬರ್ತಾರೆ ಎನ್ನೋ ಸುದ್ದಿ ಎಲ್ಲಡೆ ಮನೆ ಮಾಡಿತ್ತು. ಆದರೆ ಅದಕ್ಕೆ ಕಿಚ್ಚ ಸುದೀಪ ಈ ಕುರಿತು ಸ್ಪಷ್ಟನೆ ನೀಡಿದ್ದು ನಾನು ರಾಜಕೀಯದ ಅಖಾಡಕ್ಕೆ ಇಳಿತಿನಿ, ಆದ್ರೆ ಚುನಾವಣಾ ಅಭ್ಯರ್ಥಿಯಾಗಲ್ಲ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಎದ್ದಿರುವ ಉಹಾಪೋಹಗಳಿಗೆ ತಿಲಾಂಜಲಿ ಹಾಡಿದ್ದಾರೆ.
ಈಗಾಗಲೇ ಹಲವಾರು ರಾಜಕೀಯ ನಾಯಕರು ಕಿಚ್ಚ ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಬೇಕು ಎಂದು ಚಿಂತನೆ ನೆಡೆಸಿ ಮಾತುಕತೆಯನ್ನು ಸಹ ನೆಡೆಸಿದ್ದರು, ಅಷ್ಟೇ ಅಲ್ಲ ಮೊನ್ನೆಯಷ್ಟೇ ಕುಮಾರ ಸ್ವಾಮಿ ಅವರು ಸಹ ತಮ್ಮ ಪಕ್ಷಕ್ಕೆ ಬರುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ ಅವನ್ನೆಲ್ಲವನ್ನು ನಯವಾಗಿಯೇ ತಿರಸ್ಕರಿಸಿರುವ ಕಿಚ್ಚ ಸುದೀಪ ಸಿನೇಮಾನೇ ನನ್ನ ಪ್ರಪಂಚ ನಾನು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದರೂ ಕೂಡಾ ಮೊನ್ನೆ ಕುಮಾರ ಸ್ಮಾಮಿ ತಮ್ಮ ಜನ್ಮದಿನದಂದು ಕಿಚ್ಚ ಅವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ತೆರಳಿದ್ದು, ತದನಂತರ ಅವರ ನಡುವೆ ರಾಜಕೀಯ ವಿಷಯದ ಕುರಿತು ಅವರಿಬ್ಬರ ನಡುವೆ 2 ಗಂಟೆಗಳ ಸುಧೀರ್ಘ ಚರ್ಚೆ ನೆಡೆದಿದೆ ಎನ್ನಲಾಗಿದೆ. ಒಂದು ವೇಳೆ ಈ ಚರ್ಚೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಕಿಚ್ಚ ಸುದೀಪ್ ಜೆಡಿಎಸ್ ಪರ ಪ್ರಚಾರ ಕೈಗೊಳ್ಳುವ ಕುರಿತು ಚಿಂತನೆ ನೆಡಿಸಿದ್ದಾರೆ ಎಂಬುದು ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ.