ಲೈಗರ್ ಸಹಾಯಕ ನಿರ್ದೇಶಕ ಸಾಯಿ ಕುಮಾರ್ ಆತ್ಮಹತ್ಯೆ

ಭಾನುವಾರ, 11 ಸೆಪ್ಟಂಬರ್ 2022 (17:17 IST)
ಹೈದರಾಬಾದ್: ಲೈಗರ್ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾಯಿ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ಲೈಗರ್ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಅನುಭವಿಸಿತ್ತು. ನಿರ್ಮಾಪಕರು ಇನ್ನೂ ಹಲವರಿಗೆ ಸಂಭಾವನೆ ಪೂರ್ತಿ ಕೊಡಲೂ ಸಾಧ್ಯವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಹೀಗಾಗಿ ಲೈಗರ್ ಸೋಲಿಗೂ ಸಾಯಿ ಕುಮಾರ್ ಆತ್ಮಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ