ದಾಯಾದಿಗಳ ಚುಚ್ಚುಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ವೃದ್ಧ

ಮಂಗಳವಾರ, 6 ಸೆಪ್ಟಂಬರ್ 2022 (20:36 IST)
ದಾಯಾದಿಗಳ ಚುಚ್ಚುಮಾತಿಗೆ ಮನನೊಂದು ಆತ್ಮಹತ್ಯೆಗೆ ವೃದ್ಧ ರೈತ ಶರಣಾಗಿದ್ದಾರೆ.ನಂಜನಗೂಡಿನ ಕಪಿಲಾ ನದಿ ಸೇತುವೆ ಬಳಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 
ಸಿಂಧುವಳ್ಳಿ ಗ್ರಾಮದ  ಚಿಕ್ಕಮಾದನಾಯಕ (75 )ವರ್ಷದ ವೃದ್ಧ  ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಳೆದ ವಾರ ಭಾರಿ ಬಿರುಗಾಳಿ ಮಳೆಗೆ ಅನಾದಿ ಕಾಲದ ಮಣ್ಣಿನ ಗೋಡೆ ಕುಸಿತ ಕಂಡಿತ್ತು .ನಂಜನಗೂಡಿನ ತಹಸೀಲ್ದಾರ್ ಶಿವಮೂರ್ತಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಹಾಗೂ ಇನ್ನೂ ಅನೇಕ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದರು  
ಸ್ಥಳದಲ್ಲಿಯೇ ಮನೆ ಮಂಜೂರಾತಿಗೆ ಮತ್ತು ಸರ್ಕಾರದ ಪರಿಹಾರಕ್ಕೆಂದು ಭರವಸೆ ನೀಡಿ ಅಧಿಕಾರಿಗಳು ಸ್ಥಳದಿಂದ ತೆರಳಿದರು. 
 
 ಇನ್ನು ಇದನ್ನು ಸಹಿಸದ ದಾಯಾದಿಗಳು ಮರುದಿನವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಪ್ಪು ಸಂದೇಶ ನೀಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ.
ಅನಾದಿಕಾಲದ ವಾಸದ ಮನೆ ಬಿರುಗಾಳಿ ಮಳೆಗೆ ಬಿದ್ದಿಲ್ಲ .ಕುಟುಂಬದವರೇ ಕೆಡವಿದ್ದಾರೆ ಎಂದು ಅಧಿಕಾರಿಗಳಿಗೆ ತಪ್ಪು ಸಂದೇಶ ತಿಳಿಸಿದ್ದ ದಾಯಾದಿಗಳು ಮೃತನ ವಿರುದ್ಧ ಅಪಪ್ರಚಾರ ಮಾಡಿ ಅವಮಾನ ಮಾಡಿದ್ದಾರೆ.ಇನ್ನು ದಾಯಾದಿ ಸಂಬಂಧಿಗಳ ಆರೋಪ ಸಹಿಸಲಾಗದ ವೃದ್ಧ ಚಿಕ್ಕಮಾದನಾಯಕ  ಕಪಿಲಾ ನದಿಯ ಸೇತುವೆ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು 
ಸ್ಥಳಕ್ಕೆ ನಂಜನಗೂಡಿನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡ್ತಿದ್ದಾರೆ.
 
ನದಿಗೆ ಹಾರುವ ಮುನ್ನ ಚಿಕ್ಕಮಾದನಾಯಕ ಧರಿಸಿದ ಟವೆಲ್ ದೂರವಾಣಿ ಸಂಖ್ಯೆ ಇರುವ ಸಣ್ಣ ಪುಸ್ತಕ ಸೀನಿಯಾರಿಟಿ ಕಾರ್ಡ್ ಸಿಕ್ಕಿದೆ.ಜೊತೆಗೆ ಚಪ್ಪಲಿ ಬಿಟ್ಟು ನದಿಗೆ ಹಾರಿರುವುದು ಕಂಡುಬಂದಿದೆ .ಹೀಗಾಗಿ ಕೂಡಲೇ ಸ್ಥಳಕ್ಕೆ ನಂಜನಗೂಡಿನ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ