ಹೊಸ ರೂಪದಲ್ಲಿ ರಿಲೀಸ್ ಆಗುತ್ತಿರುವ ನಾಗರಹಾವು ಚಿತ್ರದ ಬಗ್ಗೆ ಹಿರಿಯ ನಟಿ ಲೀಲಾವತಿ ಹೇಳಿದ್ದೇನು?

ಗುರುವಾರ, 12 ಜುಲೈ 2018 (07:08 IST)
ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರು ನಟಿಸಿದ ಹಿಟ್ ಸಿನಿಮಾ 'ನಾಗರಹಾವು’ ಈಗ ಮತ್ತೆ ತೆರೆ ಮೇಲೆ ಬರುತ್ತಿದೆ. ಇದೇ ಜುಲೈ 20 ರಂದು ಈ ಸಿನಿಮಾ ಹೊಸ ರೂಪದಲ್ಲಿ ಮರು ಬಿಡುಗಡೆಯಾಗುತ್ತಿದೆ. ಇದೀಗ ಈ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಲೀಲಾವತಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


ಹಿರಿಯ ನಟಿ ಲೀಲಾವತಿ ಅವರು ಈ ಸಿನಿಮಾದ ಬಗ್ಗೆ ಮಾತನಾಡಿ, ‘'ನಾಗರಹಾವು’ ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ. ಈಗ ಸಿನಿಮಾದ ಹಾಡಗಳನ್ನು ಮತ್ತೆ ನೋಡಿ ಬೆರಗಾದೆ. ಈ ಹಿಂದೆ ಅನೇಕ ಬಾರಿ ಓಬವ್ವನ ಹಾಡನ್ನು ನೋಡಿದ್ದೇನೆ. ಆದರೆ, ಈಗ ನೋಡಿದಾಗ ಇಷ್ಟೊಂದು ಚೆನ್ನಾಗಿ ಅದನ್ನು ಮಾಡಲು ಸಾಧ್ಯನಾ ಎಂದು ಅನಿಸಿತು. ಇದನೆಲ್ಲ ಈಗ ನೋಡಿ, ಹಠಮಾರಿ ವಿಷ್ಣುವನ್ನು ಹೇಗೆ ಪುಟ್ಟಣ್ಣ ಆಯ್ಕೆ ಮಾಡಿದರು, ಪೊರ್ಕಿ ಪಾತ್ರಕ್ಕೆ ಅಂಬರೀಶ್ ರನ್ನು ಹೇಗೆ ಕರೆತಂದರು?ಎನ್ನಿಸುತ್ತದೆ’ ಎಂದು ಹೇಳಿದ್ದಾರೆ.


ನಿರ್ಮಾಪಕ ವೀರಸ್ವಾಮಿ ಅವರ ಪುತ್ರ, ರವಿಚಂದ್ರನ್ ಅವರ ಸಹೋದರ ಬಾಲಾಜಿ ನಾಗರಹಾವು ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡುತ್ತಿದ್ದಾರೆ. 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ ರಾಮಾಚಾರಿಯ ಘರ್ಜನೆ ಇನ್ನಷ್ಟು ಜೋರಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ