ಟೀಂ ಇಂಡಿಯಾವನ್ನು ಹೊಗಳಿದ್ದಕ್ಕೆ ಟ್ರೋಲ್ ಗೊಳಗಾದ ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್

ಬುಧವಾರ, 11 ಜುಲೈ 2018 (09:43 IST)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಅಭಿನಂದಿಸಿ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಟ್ರೋಲ್ ಗೊಳಗಾದ ಬೆನ್ನಲ್ಲೇ ಶೊಯೇಬ್ ಅಖ್ತರ್ ಕೂಡಾ ಟೀಂ ಇಂಡಿಯಾವನ್ನು ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.

ಪಾಕ್ ಕ್ರಿಕೆಟ್ ತಂಡವನ್ನು ಹೊಗಳಿದ್ದಕ್ಕೆ ಕೈಫ್ ರನ್ನು ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ದೇಶದ್ರೋಹಿ ಎಂದು ಟ್ವಿಟರ್ ನಲ್ಲಿ ಜರೆದಿದ್ದರು. ಇದೀಗ ಅಖ್ತರ್ ಕೂಡಾ ಅಂತಹದ್ದೇ ಟ್ರೋಲ್ ಗೆ ತುತ್ತಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಹಿಂದೂಸ್ಥಾನ್ ತಂಡ ಗೆದ್ದಿರುವುದನ್ನು ನೋಡಿದರೆ ಉಪಖಂಡಗಳ ತಂಡಗಳು ಈ ಕಿರು ಮಾದರಿ ಕ್ರಿಕೆಟ್ ನಲ್ಲಿ ಎಷ್ಟು ಪ್ರಬಲ ಎನ್ನುವುದು ಗೊತ್ತಾಗುತ್ತದೆ. ಅದರಲ್ಲೂ ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ಮೂರು ಶತಕ ಸೇರಿದಂತೆ ಅದ್ಭುತ ಇನಿಂಗ್ಸ್ ಆಡಿದರು ಎಂದು ಅಖ್ತರ್ ಟ್ವೀಟ್ ಮಾಡಿದ್ದರು.

ಇದು ಪಾಕ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರೋಹಿತ್ ರನ್ನು ಹೊಗಳಿದ್ದಕ್ಕೆ ಟ್ವಿಟರ್ ನಲ್ಲಿ ಅಖ್ತರ್ ಬೆವರಿಳಿಸಿರುವ ಟ್ವಿಟರಿಗರು ರೋಹಿತ್ ರನ್ನು ತೊಡೆಯಲ್ಲಿ ಹಾಕಿಕೋ ಎಂದಿದ್ದಾರೆ. ಇನ್ನು ಕೆಲವರು ರೋಹಿತ್ ಶತಕ ಮಾತ್ರ ನಿಮಗೆ ಕಾಣಿಸುತ್ತದೆ. ಅದೇ ಪಾಕ್ ತಂಡದ ಪರ ಅದ್ಭುತವಾಗಿ ಆಡಿದ ಫಖರ್ ಝಮನ್ ಕಣ್ಣಿಗೆ ಕಾಣಲಿಲ್ಲವೇ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ