ಸಾಲು ಸಾಲು ಸಿನಿಮಾಗಳು ರಿಲೀಸ್!

ಶುಕ್ರವಾರ, 12 ನವೆಂಬರ್ 2021 (16:31 IST)
ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ನಲ್ಲಿ ಟಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದ್ದು ಸಿನಿ ಹಬ್ಬವೇ ಶುರುವಾಗಲಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ಆಭಿನಯದ "ಮದಗಜ" ಸಿನಿಮಾ ಡಿಸೆಂಬರ್ 3 ನೇ ತಾರೀಖು ರಿಲೀಸ್ ಆಗುತ್ತಿದ್ದು, ನಟ ಶರಣ್ ಅಭಿನಯದ "ಆವತಾರ ಪುರುಷ" ಸಿನಿಮಾ ಡಿಸೆಂಬರ್ 10 ನೇ ತಾರೀಖು ಪ್ರೇಕ್ಷಕರ ಮುಂದೆ ಬರಲಿದೆ. ಡಾಲಿ ಧನಂಜಯ್ ಅಭಿನಯದ " ಬಡವ ರಾಸ್ಕಲ್" ಸಿನಿಮಾ ಡೆಸೆಂಬರ್ 24 ನೇ ತಾರೀಖು ರಿಲೀಸ್ ಆಗಲಿದ್ದು, ನಟ ರಕ್ಷಿತ್ ಶೆಟ್ಟಿ ಅಭಿನಯದ "777 ಚಾರ್ಲಿ" ಸಿನಿಮಾ ಡಿಸೆಂಬರ್ 31 ನೇ ತಾರೀಖು ರಿಲೀಸ್ ಆಗಲಿದೆ. ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ "ದೃಶ್ಯ-2 " ಚಿತ್ರ ಕೂಡ ಡಿಸೆಂಬರ್ಬಲ್ಲಿ ರಿಲೀಸ್ ಆಗಲಿದ್ದು  ಚಿತ್ರದ ರಿಲೀಸ್ ಡೇಟ್ ಮಾತ್ರ ಇನ್ನು ಫೈನಲ್ ಆಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ