‘100’ ಸಿನಿಮಾ ವೀಕ್ಷಿಸಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ
ಸೈಬರ್ ಕ್ರೈಂ ಕುರಿತಾದ ಕತೆಯಿರುವ ಕಾರಣ ಈ ಸಿನಿಮಾ ಸಮಾಜಕ್ಕೆ ಒಳ್ಳೆಯ ಪಾಠವಾಗಲಿದೆ. ಒಂದು ಸಾಮಾನ್ಯ ಕುಟುಂಬ ಸೈಬರ್ ವಂಚನೆಗೊಳಗಾಗುವ ಕತೆ ಇದರಲ್ಲಿದೆ. ಹೀಗಾಗಿ ಈ ಸಿನಿಮಾವನ್ನು ಗೃಹ ಸಚಿವರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ.
ಇದಕ್ಕಾಗಿ ಖುದ್ದಾಗಿ ರಮೇಶ್ ಅರವಿಂದ್ ಮತ್ತು ತಂಡ ಗೃಹ ಸಚಿವರನ್ನು ಭೇಟಿಯಾಗಿ ಸಿನಿಮಾ ವೀಕ್ಷಿಸಲು ಆಹ್ವಾನ ನೀಡಿದ್ದಾರೆ. ನವಂಬರ್ 19 ರಂದು ಚಿತ್ರ ತೆರೆಗೆ ಬರುತ್ತಿದೆ.