ಲಿಂಗಾ ಆಡಿಯೋ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಗೆ ಸಿದ್ಧತೆ

ಮಂಗಳವಾರ, 11 ನವೆಂಬರ್ 2014 (13:33 IST)
ಸೂಪರ್ ಸ್ಟಾರ್ ರಜನಿಕಾಂತ್, ಅನುಷ್ಕ ಮತ್ತು ಸೋನಾಕ್ಷಿ ಅಭಿನಯಿಸಿರುವ  ಲಿಂಗಾ ಚಿತ್ರಕ್ಕೆ ಚಿತ್ರಕಥೆ ಬರೆದವರು ಪೋನ್ ಕುಮಾರನ್ . ಈ ಚಿತ್ರವನ್ನು ನಿರ್ದೇಶನ ಮಾಡಿದವರು ಕೆ ಎಸ್ ರವಿಕುಮಾರ್. ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ ಎ ಆರ್ ರೆಹಮಾನ್. 
 
ಈ ಚಿತ್ರದ ಆಡಿಯೋ ಬಿಡುಗಡೆ ನವೆಂಬರ್ 16  ರಂದು ಆಗಲಿದೆ. ಲಿಂಗಾ ಚಿತ್ರವೂ ರಜನಿಕಾಂತ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಅಂದರೆ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ. ಅದಕ್ಕೆಂದು ಭರದಿಂದ ಸಿದ್ಧತೆ ನಡೆದಿದೆ ಎಂದು ಪೋನ್ ಕುಮಾರನ್ ಹೇಳಿದ್ದಾರೆ. 
 
ಈ ಚಿತ್ರದಲ್ಲಿ ರಜನಿ ಸಾರ್ ಅವರ ಪಾತ್ರ ತುಂಬಾ ಪವರ್ಫುಲ್ ಆಗಿದೆ ಎಂದು ಹೇಳಿರುವ ಪಿ ಕುಮಾರ್ ರಜನಿ ಸರ್ ಮಾತ್ರ ಅಂತ ಪಾತ್ರಗಳನ್ನೂ ಮಾಡೋಕೆ ಸಾಧ್ಯ ಎನ್ನುವುದನ್ನು ಈ ಚಿತ್ರದ ಮುಖಾಂತರ ಮತ್ತೆ ಸಾಬೀತು ಮಾಡಿದ್ದಾರೆ ಎಂದು ಹೇಳಿದ್ದಾರೆ. 
 
ಫೆಬ್ರವರಿ ಮೊದಲವಾರದಲ್ಲಿ ತಾನು ಈ ಚಿತ್ರದ ಕಥೆಯನ್ನು ರಜನಿಕಾಂತ್ ಅವರ ಮುಂದೆ ಹೇಳಿದರಂತೆ ಅದೂ ಎರಡು ಗಂಟೆಗಳ ಕಾಲ. ಎರಡು ದಿನಗಳಾದ ಬಳಿಕ ಕರೆ ಬಂತು. ನಿರ್ದೇಶಕ ಕೆ ಎಸ್ ರವಿಕುಮಾರ್ ಅವರ ನೇತೃತ್ವದಲ್ಲಿ ಈ ಚಿತ್ರದ ಸಂಭಾಷಣೆ ಯನ್ನು ಸತತ ಮೂರು ತಿಂಗಳುಗಳ  ಕಾಲ ಮಾಡಿದರಂತೆ. ಈ ಚಿತ್ರದಲ್ಲಿ ಪಿ ಕುಮಾರನ್  ಸಹಾಯಕ ನಿರ್ದೇಶಕರಾಗಿದ್ದಾರೆ. ಲಿಂಗಾ ಚಿತ್ರಕ್ಕೆ ಸುಮಾರು 150  ಕೋಟಿ ವೆಚ್ಚ ಮಾಡಲಾಗಿದೆಯಂತೆ.ಅದನ್ನು ಸುಮಾರು 150 ದಿನಗಳ ಕಾಲ್ ಶೂಟಿಂಗ್ ಮಾಡಲಾಗಿದೆ ಎಂದು ಹೇಳಿದ್ದಾರೆ ಪಿ.ಕುಮಾರನ್. 
 

ವೆಬ್ದುನಿಯಾವನ್ನು ಓದಿ