ಕಿರಿಕ್ ಪಾರ್ಟಿಯ ಕತೆಯೊಂದ ಕೇಳಿರಿ

ಮಂಗಳವಾರ, 29 ನವೆಂಬರ್ 2016 (15:04 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ. ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು ಸೂಪರ್ ಹಿಟ್ ಆಗಿದೆ. ಇದೀಗ ಮೂರನೇ ಹಾಡು ಕತೆಯೊಂದ ಹೇಳುವೆ ಹಾಡು  ನಿಮಗಾಗಿ ಆನ್ ಲೈನ್ ನಲ್ಲಿ ಹರಿಯ ಬಿಟ್ಟಿದ್ದಾರೆ ಕಿರಿಕ್ ತಂಡ.

ಇದು ಕಿರಿಕ್ ಪಾರ್ಟಿ ಚಿತ್ರದ ಟೈಟಲ್ ಗೀತೆಯಂತೆ. ಇದನ್ನು ಚಿತ್ರೀಕರಿಸುವಾಗಲೇ ತುಂಬಾ ಮೆಚ್ಚುಕೊಂಡು ಅಭಿನಯಿಸಿದ್ದೆ. ನನ್ನ ಕಾಲೇಜು ದಿನಗಳ ನೆನಪಿಸಿದ ಹಾಡಿದು ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ.

ಕಾಲೇಜು ಹುಡುಗರ ಬಗೆಗೆ ಮಾಡಲಾದ ಹಾಡನ್ನು ವರುಣ್ ರಾಮಚಂದ್ರ ಹಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಅವರ ತಿರುಬೋಕಿ ಜೀವನ ಮತ್ತು ಬೆಳಗಾಗೆದ್ದು ಹಾಡಿನಂತೆ ಇದು ಕೂಡಾ ಸೂಪರ್ ಹಿಟ್ ಆಗುವ ಎಲ್ಲಾ ಲಕ್ಷಣಗಳಿವೆ.  ಈ ಯೂಥ್ ಫುಲ್ ಹಾಡನ್ನು ನೀವೂ ಯೂ ಟ್ಯೂಬ್ ನಲ್ಲಿ ಕೇಳಿ ಆನಂದಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ