ನಾ ನಿನ್ನೇ ಮದುವೆ ಆಗ್ತೀನಿ ಎಂದ ಹುಡುಗ! ನಾಚಿ ನೀರಾದ ರಶ್ಮಿಕಾ ಮಂದಣ್ಣ!!

ಗುರುವಾರ, 21 ಫೆಬ್ರವರಿ 2019 (09:33 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣರನ್ನು ಕಂಡರೆ ಎಷ್ಟು ಜನ ಹುಡುಗರು ಇಂತಹ ಹುಡುಗಿ ತಮಗೆ ಸಿಕ್ಕರೆ ಎಂದು ಅಂದುಕೊಳ್ಳಲ್ಲ? ಆದರೆ ಇದೀಗ ಹುಡುಗನೊಬ್ಬ ರಶ್ಮಿಕಾಗೆ ಓಪನ್ ಆಗಿ ನಿನ್ನೇ ಮದುವೆ ಆಗೋದು ಎಂದು ವಿಡಿಯೋ ಮೂಲಕ ಹೇಳಿದ್ದಾನೆ!


ಆ ಹುಡುಗನ ವಿಡಿಯೋ ನೋಡಿ ನಾಚಿದ ರಶ್ಮಿಕಾ ತಮ್ಮ ಟ್ವಿಟರ್ ನಲ್ಲಿ ರಿಟ್ವೀಟ್ ಕೂಡಾ ಮಾಡಿದ್ದಾರೆ! ಅಂದ ಹಾಗೆ ಯಾರಪ್ಪಾ ರಶ್ಮಿಕಾ ಮನ ಕದ್ದ ಹುಡುಗ ಎಂದುಕೊಂಡಿರಾ?

ಅಷ್ಟಕ್ಕೂ ರಶ್ಮಿಕಾರನ್ನು ಮದುವೆಯಾಗುತ್ತೇನೆ ಎಂದವ ಪುಟಾಣಿ ಬಾಲಕ! ಅಭಿಮಾನಿಯೊಬ್ಬರು ರಶ್ಮಿಕಾಗೆ ಈ ವಿಡಿಯೋ ಟ್ವೀಟ್ ಮಾಡಿದ್ದರು. ಇದರಲ್ಲಿ ಪುಟ್ಟ ಪೋರನಿಗೆ ತೆಲುಗಿನಲ್ಲಿ ನೀನು ಯಾರನ್ನು ಮದುವೆಯಾಗುವುದು ಎಂದು ಕೇಳುತ್ತಾರೆ. ಅದಕ್ಕೆ ಆತ ‘ರಶ್ಮಿಕಾ’ ಅಂತಾನೆ. ಯಾವ ರಶ್ಮಿಕಾ ಎಂದರೆ ‘ಇಂಕೆ ಇಂಕೆ ರಶ್ಮಿಕಾ’ ಎಂದು ಉತ್ತರಿಸುತ್ತಾನೆ. ಗೀತ ಗೋವಿಂದ ಸಿನಿಮಾ ಮೂಲಕ ರಶ್ಮಿಕಾ ತೆಲುಗು ಸಿನಿಮಾ ಪ್ರಿಯರಿಗೂ ಇಷ್ಟವಾಗಿದ್ದರು.

ಇದೀಗ ಈ ವಿಡಿಯೋ ನೋಡಿದ ರಶ್ಮಿಕಾ ತೆಲುಗಿನಲ್ಲೇ ಪ್ರತಿಕ್ರಿಯಿಸಿದ್ದು ‘ಆ... ನನ್ನನ್ನೇ ಮದುವೆ ಆಗ್ತೀಯಾ? ಅಯ್ಯೋ.. ನಂಗೆ ತುಂಬಾ ನಾಚಿಕೆ ಆಗ್ತಿದೆ. ಸೋ ಕ್ಯೂಟ್. ಈ ಮಗುವಿಗೆ ನನ್ನ ಪ್ರೀತಿ ತಿಳಿಸಿ..’ ಎಂದು ಸಿಹಿ ಮುತ್ತೂ ಕೊಟ್ಟಿದ್ದಾರೆ. ಇದನ್ನು ನೋಡಿ ಹಲವರು ನನ್ನೇ ಮದುವೆ ಆಗಿ ಎಂದು ಕಾಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ