ಲವ್ 360 ಬಗ್ಗೆ ಹೆಚ್ಚಿದ ನಿರೀಕ್ಷೆ: ಇಂದು ಸಿನಿಮಾ ರಿಲೀಸ್
ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ಬಗ್ಗೆ ಈಗ ಗಾಂಧಿನಗರದಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ. ಇಂದು ಸಿನಿಮಾ ಬಿಡುಗಡೆಯಾಗುತ್ತಿದೆ.
ಪ್ರವೀಣ್ ಎಂಬ ಯುವ ನಾಯಕ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಹೊಸಬರನ್ನು ಕಟ್ಟಿಕೊಂಡು ಅತ್ಯುತ್ತಮ ಸಿನಿಮಾ ಕೊಡುವುದರಲ್ಲಿ ಶಶಾಂಕ್ ಸಿದ್ಧಹಸ್ತರು. ಹೀಗಾಗಿ ಈ ಸಿನಿಮಾವೂ ಗಮನ ಸೆಳೆಯಬಹುದು, ಪ್ರವೀಣ್ ಗೆ ಒಳ್ಳೆಯ ಭವಿಷ್ಯ ಸಿಗಬಹುದು ಎಂಬ ನಿರೀಕ್ಷೆಯಿದೆ.