ಪ್ರೀತಿಗೆ ನೀಡುವಷ್ಟು ಪ್ರಾಮುಖ್ಯತೆ ಮತ್ಯಾವುದಕ್ಕೂ ನೀಡಲ್ಲ

ಶನಿವಾರ, 18 ಅಕ್ಟೋಬರ್ 2014 (14:22 IST)
ಪ್ರೀತಿಗೆ ಅತ್ಯಧಿಕ ಆದ್ಯತೆ ನೀಡುತ್ತೇನೆ ಎಂದು ಬಾಲಿವುಡ್ ನ ಗೋಲ್ಡನ್ ಲೆಗ್ ಗರ್ಲ್ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಇದು ತನ್ನ ಬದುಕಲ್ಲಿ ಬಹಳ ಮುಖ್ಯವಾಗಿದೆ.ನಾನು ಗೆಲುವಿಗೂ ಸಹಿತ ಹೆಚ್ಚು ಪ್ರಾಮುಖ್ಯತೆ ನೀಡಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. 
 
ಅದೇ ರೀತಿ ಹಣಕ್ಕೆ ನಾನು ಕೊಡುವ ಪ್ರಾಮುಖ್ಯತೆ ಕೊನೆಯದ್ದು. ಕೇವಲ ಗೆಲುವಿಗಾಗಿ ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದರೆ ಅದು ಯಾವ ರೀತಿಯಿಂದಲೂ ಸಹ ಸರಿಯಲ್ಲ ನನ್ನ ವಿಷಯದಲ್ಲಿ. ಈಗ ದೀಪಿಕ ಹಲವಾರು ಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಿನ್ನೆ ಅಂದರೆ ಶುಕ್ರವಾರ ಆಕೆ ಪತ್ರಕರ್ತರ ಜೊತೆ ಮಾತನಾಡುವಾಗ ಈ ಸಂಗತಿಯನ್ನು ತಿಳಿಸಿದ್ದಾರೆ.
 
ಹೀರೋಯಿನ್ ಆಗುವುದು ಅಷ್ಟೊಂದು ಸುಲಭವಲ್ಲ. ಅದಕ್ಕಾಗಿ ತಾನೆಷ್ಟು ಕಷ್ಟ ಪಟ್ಟಿದ್ದೇನೆ ಎಂದು ಹೇಳಿದ್ದಾರೆ. ಈಗ ಹೀರೋಯಿನ್  ನ ಕಂಫರ್ಟ್ ಜೋನ್ ನಲ್ಲಿ ಇರುವುದಾಗಿ ಹೇಳಿದ್ದು, ಹೃದಯಕ್ಕೆ  ಹತ್ತಿರವಾಗುವ ಕಥೆಗಳಿಗೆ ಆದ್ಯತೆ ನೀಡುವುದಾಗಿ ಆಕೆ ತಿಳಿಸಿದ್ದಾರೆ. 
 
ಅಲ್ಲದೆ  ತಾನು ನಟಿಸುವ ಚಿತ್ರಗಳು  ಬಾಕ್ಸಾಫೀಸಲ್ಲಿ ಎಷ್ಟರ ಮಟ್ಟಿಗೆ ಗೆಲುವು ಕಾಣುತ್ತದೆ , ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಹೀಗೆ ಯಾವ ಅಂಶಗಳ ಬಗ್ಗೆಯೂ ತಾನು ಪ್ರಾಮುಖ್ಯತೆ ನೀಡುವುದಿಲ್ಲ ಎಂದು ಹೇಳಿದ್ದಾಳೆ ಆಕೆ. ಈಗ ದೀಪಿಕ ನಟಿಸಿರುವ ಹ್ಯಾಪಿ ನ್ಯೂ ಇಯರ್ ಈ ತಿಂಗಳ 24 ನೇ ತಾರೀಖಿನಂದು ಬಿಡುಗಡೆ ಆಗುತ್ತಿದೆ. ಬಾಲಿವುಡ್ ನವರ ಗಮನ ಸಂಪೂರ್ಣವಾಗಿ ಈ ಚಿತ್ರದ ಮೇಲಿದೆ. 
 

ವೆಬ್ದುನಿಯಾವನ್ನು ಓದಿ