ಲವ್ ಮಾಕ್ಟೇಲ್ 2 ರಿಲೀಸ್ ದಿನಾಂಕ ಪ್ರಕಟ
ಲವ್ ಮಾಕ್ಟೇಲ್ 2 ಸಿನಿಮಾ ಫೆಬ್ರವರಿ 11 ರಂದು ತೆರೆಗೆ ಬರಲಿದೆ. ಫೆಬ್ರವರಿ 14 ರಂದು ಡಾರ್ಲಿಂಗ್ ಕೃಷ್ಣ-ಮಿಲನಾ ದಂಪತಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ವಿಶೇಷ ಗಳಿಗೆಯಂದೇ ಸಿನಿಮಾ ತೆರೆಗೆ ಬರುತ್ತಿದೆ.
ಲವ್ ಮಾಕ್ಟೇಲ್ ಒಂದನೇ ಭಾಗ ಭಾರೀ ಯಶಸ್ಸು ತಂದುಕೊಟ್ಟಿತ್ತು. ಹೊಸ ಬಗೆಯ ಲವ್ ಸ್ಟೋರಿಯಿಂದ ಕೃಷ್ಣ ನಟನೆ ಜೊತೆಗೆ ನಿರ್ದೇಶಕನಾಗಿಯೂ ಗೆದ್ದಿದ್ದರು. ಹೀಗಾಗಿ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಇಂದಿಗೆ ಬಹುಬೇಡಿಕೆಯಿದೆ. ಇದೀಗ ಲವ್ ಮಾಕ್ಟೇಲ್ ಸಿನಿಮಾದ ಎರಡನೇ ಭಾಗವೂ ಬಿಡುಗಡೆಗೆ ಸಿದ್ಧವಾಗಿದೆ.