ಸೆಲೆಬ್ರಿಟಿಗಳು ಮೆಚ್ಚಿದ ಲವ್ ಯೂ ರಚ್ಚು ಇಂದಿನಿಂದ ರಿಲೀಸ್

ಶುಕ್ರವಾರ, 31 ಡಿಸೆಂಬರ್ 2021 (09:09 IST)
ಬೆಂಗಳೂರು: ಅಜೇಯ್ ರಾವ್-ರಚಿತಾ ರಾಂ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲವ್ ಯೂ ರಚ್ಚು ಸಿನಿಮಾ ಇಂದಿನಿಂದ ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.

ಸೆಲೆಬ್ರಿಟಿಗಳಿಗಾಗಿ ಈಗಾಗಲೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಇದೊಂದು ವಿಶಿಷ್ಟ ಸಿನಿಮಾ ಎಂದು ಕೊಂಡಾಡಿದ್ದಾರೆ.

ಸಿನಿಮಾದಲ್ಲಿ ಪತ್ನಿಯನ್ನು ರಕ್ಷಿಸುವ ಪತಿಯಾಗಿ ಅಜೇಯ್ ರಾವ್ ಅದ್ಭುತ ಅಭಿನಯ ನೀಡಿದ್ದಾರೆಂದು ಸೆಲೆಬ್ರಿಟಿಗಳು ಕೊಂಡಾಡಿದ್ದಾರೆ. ಇದೀಗ ಪ್ರೇಕ್ಷಕ ಪ್ರಭು ಏನಂತಾನೆ ಎಂದು ಕಾಯಬೇಕಷ್ಟೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ