ಐ ಚಿತ್ರ ಗೆಲ್ತಾ ಅಥವಾ ಸೋಲ್ತಾ ..

ಶುಕ್ರವಾರ, 16 ಜನವರಿ 2015 (11:50 IST)
ಬುಧವಾರ ಬಿಡುಗಡೆಯಾದ ಐ ಚಿತ್ರಕ್ಕೆ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಐ ಚಿತ್ರದ ಮೊದಲ ದಿನ ಆ ಚಿತ್ರವನ್ನು  ವೀಕ್ಷಿಸಿದ ಜನರು ಅದರ ವಿಶೇಷತೆಗೆ ಬೆರಗಾಗಿದ್ದಾರೆ. ಅಲ್ಲದೆ ಆ ಚಿತ್ರವೂ ವೀಕೆಂಡ್  ಮಸ್ತಿಗೆ ಅತ್ಯುತ್ತಮವಾಗಿದೆ ಎನ್ನುವ ಅಭಿಪ್ರಾಯ ಹೊಂದಿದ್ದಾರೆ ವಿಕ್ರಮ್ ಹಾಗು ಶಂಕರ್ ಅಭಿಮಾನಿಗಳು.
 
ಐ  ಚಿತ್ರವನ್ನು  ಆಸ್ಕರ್ ವಿ ರವಿಚಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ, ಆ ಚಿತ್ರದ  ನಿರ್ದೇಶನ ಮಾಡಿದ್ದಾರೆ ಶಂಕರ್. ರೋಬೋ ಬಳಿಕ ಈ ಚಿತ್ರದ ನಿರ್ದೇಶನ ಮಾಡಿದ್ದು,  ವಿಕ್ರಮ ಅಭಿಮಾನಿಗಳು ಆ ಚಿತ್ರದ ಲೋಕೇಶನ್ ಬಗ್ಗೆ ಹಾಗು ಭಿನ್ನತೆ ಬಗ್ಗೆ ಖುಷಿ ಆಗಿದ್ದಾರೆ.
 
ಈ ಮಾಹಿತಿ ಒಂದೆಡೆ ಇಡೋಣ, ಆದರೇ ಇದರ ಜೊತೆಗೆ ಐ  ಚಿತ್ರ ಹೇಳಿಕೊಳ್ಳುವಷ್ಟು ಚಂದ ಇಲ್ಲ ಎನ್ನುವ ಗಟ್ಟಿ ವಿಮರ್ಶೆಗಳು ಕೇಳಿಬರುತ್ತಿವೆ. ಇವರ ಪ್ರಕಾರ ಈ ಚಿತ್ರದ ನಿರ್ದೇಶನ, ಕಥೆ ವಿಷಯದಲ್ಲಿ ಶಂಕರ್ ಸೋತಿದ್ದಾರೆ.

ಈ ಚಿತ್ರ ಜನರ  ನಿರೀಕ್ಷೆಯಂತೆ ಇಲ್ಲ ಎನ್ನುವ ಸುದ್ದಿ ಕೇಳಿ ಬಂದಿದೆ. ಒಟ್ಟಾರೆ ಅತಿಯಾದ ಪ್ರಚಾರವು ಸಹಿತ ಸೋಲಿಗೆ ಕಾರಣ ಆಗಿರ ಬಹುದು ಎನ್ನುತ್ತಿದ್ದಾರೆ ವಿಮರ್ಶಕರು. ಒಂದೇ ದಿನದಲ್ಲಿ ಯಾವುದೇ ಚಿತ್ರದ ಫಲಿತಾಂಶದ ಹೇಳಲಾಗದು, ಪ್ರೇಕ್ಷಕ ಪ್ರಭು ಮನಸ್ಸು ಮಾಡಿದರೆ ಚಿತ್ರವು  ಗೆಲ್ಲುವುದರಲ್ಲಿ ಏನೇನು ಸಂಶಯವಿಲ್ಲ ಅಂತಾ ಇದ್ದಾರೆ ಕಾಲಿವುಡ್  ನವರು. 
 
ಅಮೇರಿಕಾ ಒಂದರಲ್ಲೇ 450 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿರುವ ಐ ಚಿತ್ರ ಬಾಕ್ಸಾಫೀಸನ್ನು  ನಿಸ್ಸಂಶವಾಗಿ ನಡುಗುವಂತೆ ಮಾಡುತ್ತದೆ ಎಂದಿದ್ದಾರೆ ಕಾಲಿವುಡ್ ನವರು.. ಕಾಲವೇ ಎಲ್ಲಕ್ಕೂ ಉತ್ತರ ನೀಡುತ್ತದೆ!
 

ವೆಬ್ದುನಿಯಾವನ್ನು ಓದಿ