ಬಹುದೊಡ್ಡ ನಿರೀಕ್ಷೆಯಲ್ಲಿ ಮಹೇಶ್ ಬಾಬು

ಸೋಮವಾರ, 3 ಆಗಸ್ಟ್ 2015 (10:17 IST)
ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯಿಸಿರುವ ಶ್ರೀಮಂತುಡು ಸಿನಿಮಾ ಇದೇ ತಿಂಗಳ ಆಗಸ್ಟ್ ಕ್ಷ ರಂದು ಪ್ರೇಕ್ಷಕರೆದುರಿಗೆ ಬರಲಿದೆ. ಈಗಾಗಲೇ ಸಿನಿಮಾದ ಬಗ್ಗೆ ಎಲ್ಲೆಡೆ ನಿರೀಕ್ಷೆಗಳು ಹೆಚ್ಚಾಗಿದ್ದು, ಚಿತ್ರತಂಡ ಕೂಡ ಚಿತ್ರ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದೆಯಂತೆ. 
ಇನ್ನು ಈಗಾಗಲೇ ಬಿಡುಗಡೆಯಾಗಿರುವ ಬಾಹುಬಲಿ ಸಿನಿಮಾ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದ್ದು, ಹಲವು ದಾಖಲೆಗಳನ್ನು ಮುರಿದಿದೆ. ಇದೀಗ ಇದೇ ಸನ್ನಿವೇಶದಲ್ಲಿ ಮಹೇಶ್ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಬಾಹುಬಲಿ ಸಿನಿಮಾದ ದಾಖಲೆಯನ್ನು ಮುರಿಯುವತ್ತ ಮಹೇಶ್ ಪ್ರಯತ್ನಿಸುತ್ತಿದ್ದಾರಂತೆ. ಅಲ್ಲದೇ ಅದಕ್ಕಾಗಿ ಪ್ತನಿ ನಮೃತಾ ಜೊತೆ ಸೇರಿ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಇನ್ನು ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಆಡಿಯೋ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. 
 
ಸಿನಿಮಾದಲ್ಲಿ ಮಹೇಶ್ ಗೆ ನಾಯಕಿಯಾಗಿ ಶೃತಿ ಹಾಸನ್ ಕಾಣಿಸಿಕೊಂಡಿದ್ದು, ಕೊರಟಾಲ ಶಿವ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ದಾರೆ. ಒಟ್ಟಿನಲ್ಲಿ ತೆಲುಗಿನಲ್ಲಿ ಬಹು ನಿರೀಕ್ಷಿತ ಸಿನಿಮಾವೊಂದರ ಬಿಡುಗಡೆಗೆ ವೇದಿಕೆ ಸಿದ್ಧವಾಗುತ್ತಿದ್ದು ಅದು ಎಷ್ಟರ ಮಟ್ಟಿಗೆ ಕ್ಲಿಕ್ ಆಗುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವೆಬ್ದುನಿಯಾವನ್ನು ಓದಿ