ರಾಜಮೌಳಿ ಜೊತೆಗಿನ ಸಿನಿಮಾದ ದೊಡ್ಡ ಸೀಕ್ರೆಟ್ ಬಯಲು ಮಾಡಿದ ಮಹೇಶ್ ಬಾಬು

ಶನಿವಾರ, 4 ಜೂನ್ 2022 (09:20 IST)
ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ಜೊತೆ ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ಮಾಡಲಿರುವುದು ಗೊತ್ತೇ ಇದೆ. ಈ ಸಿನಿಮಾ ಬಗ್ಗೆ ಮಹೇಶ್ ಬಾಬು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಈ ಸಿನಿಮಾ ಕತೆ ಇನ್ನೂ ಫೈನಲ್ ಆಗಿಲ್ಲ. ಕೆಲವು ಐಡಿಯಾಗಳಿವೆ. ಆದರೂ ಅದನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಮಹೇಶ್ ಬಾಬು ಹೇಳಿದ್ದಾರೆ.

ಹಾಗಿದ್ದರೂ ಈ ಸಿನಿಮಾ ಒಂದು ಅಡ್ವೆಂಚರ್ ಸಿನಿಮಾವಾಗಿರಲಿದೆ ಎಂದಿದ್ದಾರೆ. ಇನ್ನು ಕತೆಗಾರ ವಿಜಯೇಂದ್ರ ಪ್ರಸಾದ್ ಈ ಸಿನಿಮಾ ಆಫ್ರಿಕನ್ ಜಂಗಲ್ ಸಫಾರಿ ಕತೆಯಾಗಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಮಹೇಶ್ ಬಾಬು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಸಿನಿಮಾ ಅಷ್ಟೇ ಅದ್ಭುತವಾಗಿ ಮೂಡಿಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ