ಬಾಲಿವುಡ್ ನವರಿಗೆ ನನ್ನ ಭರಿಸಲು ಆಗಲ್ಲ, ಅಲ್ಲಿಗೆ ಹೋಗಿ ಟೈಂ ವೇಸ್ಟ್ ಮಾಡಲ್ಲ ಎಂದ ಮಹೇಶ್ ಬಾಬು
ಇದೀಗ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಂದರ್ಶನವೊಂದರಲ್ಲಿ ಬಾಲಿವುಡ್ ಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ಎಲ್ಲರನ್ನೂ ದಂಗುಬಡಿಸಿದೆ.
ಬಾಲಿವುಡ್ ನವರಿಗೆ ನನ್ನ ಭರಿಸಲು ಸಾಧ್ಯವಿಲ್ಲ. ನಾನು ಹಿಂದಿ ಸಿನಿಮಾಗೆ ಹೋಗಿ ಸಮಯ ಹಾಳು ಮಾಡಲ್ಲ. ದಕ್ಷಿಣದಲ್ಲಿ ನನಗೆ ಸಿಗುವ ಗೌರವ, ಸ್ಟಾರ್ ಗಿರಿ ದೊಡ್ಡದು. ಹೀಗಾಗಿ ಈ ಇಂಡಸ್ಟ್ರಿ ಬಿಟ್ಟು ಹೋಗುವ ಬಗ್ಗೆ ಯಾವತ್ತೂ ಯೋಚಿಸಿಲ್ಲ. ನನ್ನ ಕನಸುಗಳೆಲ್ಲಾ ಈಗ ನನಸಾಗಿದೆ. ನಾನು ಈಗ ಮತ್ತಷ್ಟು ಖುಷಿಯಾಗಿದ್ದೇನೆ ಎಂದಿದ್ದಾರೆ.