ಶಾರುಖ್ ಜೊತೆ ನಟನೆಯ ಅನುಭವ ಹಂಚಿಕೊಂಡ ಮಹಿರಾ

ಸೋಮವಾರ, 27 ಏಪ್ರಿಲ್ 2015 (10:28 IST)
ಪಾಕಿಸ್ತಾನಿ ನಟಿ ಮಹಿರಾ ಖಾನ್ ಈಗ ಬಾಲಿವುಡ್ ನಲ್ಲಿ ತನ್ನ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತಿದ್ದಾಳೆ. ಆಕೆಯ ಅಭಿನಯ ಚೊಚ್ಚಲ ಚಿತ್ರವನ್ನು ರಾಹುಲ್ ಧೋಲಾಕಿಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. 
ಶಾರುಖ್ ಖಾನ್ ಅವರ ಜೊತೆ ಶೂಟಿಂಗ್‌ನ ಮೊದಲ ದೃಶ್ಯದ ಬಗೆಗಿನ ಅನುಭವವನ್ನು ಆಕೆ ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾಳೆ. ಮಹಿರಾಳಂತೆ ದೀಪಿಕ ಪಡುಕೋಣೆ  ಹಾಗೂ ಅನುಷ್ಕ ಶರ್ಮ ಸಹಿತ ಶಾರುಖ್ ಅವರ ಜೊತೆ ತಮ್ಮ ಚೊಚ್ಚಲ ಚಿತ್ರದಲ್ಲಿ ಅದೂ ದೊಡ್ಡ ಬ್ಯಾನರ್ ನಲ್ಲಿ ನಟಿಸಿದ್ದರು. 
 
ಈ ಚಿತ್ರ ನವಾಜುದ್ದೀನ್ ಸಿದ್ದಿಖಿ ಸಹ ಈ ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ. ಶಾರೂಖ್ ಖಾನ್ ಅವರು ಏಪ್ರಿಲ್ 22ರಿಂದ ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲು ಆರಂಭ ಮಾಡಿದ್ದಾರೆ. ಪಾಕಿಸ್ತಾನಿ ಕಲಾವಿದರು ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಹೊಸದಲ್ಲ, ಈಗ ಆ ಪಟ್ಟಿಗೆ ಮಹಿರಾ ಸೇರ್ಪಡೆ ಆಗಿದ್ದಾಳೆ. 

ವೆಬ್ದುನಿಯಾವನ್ನು ಓದಿ