ಅದೃಷ್ಟಕ್ಕಾಗಿ ಬದಲಾಯಿತು ಪುತ್ರಿ ಹೆಸರು ಬದಲಾಯಿಸಿದ ಮಾಲಾಶ್ರೀ

ಭಾನುವಾರ, 20 ಆಗಸ್ಟ್ 2023 (17:01 IST)
Photo Courtesy: Instagram
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿರುವ ನಟಿ ಮಾಲಾಶ್ರೀ ಪುತ್ರಿ ರಾಧನಾ ಹೆಸರು ಬದಲಾಯಿಸಿಕೊಂಡಿದ್ದಾರೆ.

ಈಗಾಗಲೇ ಒಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ರಾಧನಾ ಹೆಸರನ್ನು ಈಗ ಆರಾಧನಾ ಎಂದು ಬದಲಾಯಿಸಲಾಗಿದೆ.

ಚಿತ್ರರಂಗಕ್ಕೆ ಬಂದ ನಂತರ ಅನೇಕ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಅನೇಕ ಉದಾಹರಣೆಗಳಿವೆ. ಸಾಹಸಸಿಂಹ ವಿಷ್ಣುವರ್ಧನ್ ಅವರಿಂದ ಹಿಡಿದು ಇಂದಿನ ರಾಕಿಂಗ್ ಸ್ಟಾರ್ ಯಶ್ ವರೆಗೆ ಎಲ್ಲರೂ ಹೆಸರು ಬದಲಾಯಿಸಿಕೊಂಡು ಸಿನಿಮಾದಲ್ಲಿ ಗುರುತಿಸಿಕೊಂಡವರು. ಈಗ ರಾಧನಾ ಕೂಡಾ ಆರಾಧನಾ ಆಗಿ ಅದೃಷ್ಟ ಬದಲಾಗುವ ನಿರೀಕ್ಷೆಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ