ಹುಟ್ಟುಹಬ್ಬಕ್ಕೆ ಡಾಲಿ ಧನಂಜಯ್ ನೀಡಿದ್ದಾರೆ ಎರಡು ಗುಡ್ ನ್ಯೂಸ್

ಭಾನುವಾರ, 20 ಆಗಸ್ಟ್ 2023 (16:45 IST)
ಬೆಂಗಳೂರು: ಪೋಷಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಡಾಲಿ ಧನಂಜಯ್ ಈಗ ನಾಯಕನಾಗಿ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿದ್ದಾರೆ. ಅವರ ಹುಟ್ಟುಹಬ್ಬಕ್ಕೆ (ಆಗಸ್ಟ್ 23) ಈಗ ಎರಡೇ ದಿನ ಬಾಕಿಯಿದೆ.

ಈ ಬಾರಿ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಡಾಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

‘2018 ರಲ್ಲಿ ಜಯನಗರದ ಶಾಲಿನಿ ಗ್ರೌಂಡ್ಸ್ ನಲ್ಲಿ ಕೊನೆಯ ಬಾರಿಗೆ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿದ್ದೆ. ಅದಾದ ಬಳಿಕ ಕೊವಿಡ್ ನಿಂದಾಗಿ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಲು ಸಾಧ‍್ಯವಾಗಿಲ್ಲ. ಈ ಬಾರಿ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಲಿದ್ದೇನೆ. ಆದರೆ ಮನೆಯ ಹತ್ತಿರ ಬರಬೇಡಿ. ಆಗಸ್ಟ್ 22 ಕ್ಕೆ ಸಂಜೆ ಸಂತೋಷ್ ಚಿತ್ರಮಂದಿರದಲ್ಲಿ ನಮ್ಮ ಉತ್ತರಕಾಂಡ ಸಿನಿಮಾ ಟೀಸರ್ ಬಿಡುಗಡೆ ಆಗಲಿದೆ. ಅದಾದ ಬಳಿಕ ರಾತ್ರಿ 11 ಗಂಟೆಗೆ ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ಕೇಕ್ ಕತ್ತರಿಸಿ ನಿಮ್ಮೊಂದಿಗೆ ಸಂಭ್ರಮಿಸಲಿದ್ದೇನೆ. ಮಾರನೆಯ ದಿನ ಆಗಸ್ಟ್ 23 ನನ್ನ ಹುಟ್ಟುಹಬ್ಬದಂದು ನಂದಿ ಲಿಂಕ್ಸ್ ಗ್ರೌಂಡ್ಸ್ ನಲ್ಲಿ ನಿಮ್ಮೊಂದಿಗರಲಿದ್ದೇನೆ’ ಎಂದಿದ್ದಾರೆ. ಆದರೆ ಯಾರೂ ಹಾರ-ತುರಾಯಿಗಳನ್ನು ತರಬೇಡಿ ಎಂದು ಮನವಿಯನ್ನೂ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ