ಉಪೇಂದ್ರಗೆ ಜೋಡಿಯಾದ ಮಾಲಾಶ್ರೀ ಮಗಳು ಆರಾಧನಾ, ವಯಸ್ಸಿನ ಅಂತರ ಬಗ್ಗೆ ಚಿತ್ರತಂಡ ಹೀಗೇ ಹೇಳಿದ್ದು

Sampriya

ಬುಧವಾರ, 6 ಆಗಸ್ಟ್ 2025 (15:58 IST)
Photo Credit X
ಕಾಟೇರ ಸಿನಿಮಾದಲ್ಲಿ ನಟ ದರ್ಶನ್‌ಗೆ ಜೋಡಿಯಾಗಿ ಅಭಿನಯಿಸಿ ಕನ್ನಡಿಗರ ಮನಸ್ಸು ಗೆದ್ದ ಮಾಲಾಶ್ರೀ ಮಗಳು ಆರಾಧನಾ ಇದೀಗ ಮತ್ತೊಬ್ಬ ಸ್ಟಾರ್ ನಟನಿಗೆ ಜೋಡಿಯಾಗಿ ಅಭಿನಯಿಸಲಿದ್ದಾರೆ. ನಟ ಉಪೇಂದ್ರ ಅವರ ಮುಂದಿನ ಸಿನಿಮಾದಲ್ಲಿ ಜೋಡಿಯಾಗಿ ಅಭಿನಯಿಸಲಿದ್ದಾರೆ. 

ಕಾಟೇರ ಸಿನಿಮಾ ಬಳಿಕ ಬಹಳ ಗ್ಯಾಪ್ ಪಡೆದು ಮತ್ತೊಂದು ಕನ್ನಡ ಸಿನಿಮಾಗೆ ಸಹಿ ಹಾಕಿದ್ದಾರೆ. 

ತರುಣ್ ಶಿವಪ್ಪ ಅವರ ಬಿಗ್‌ಬಜೆಟ್‌ನಲ್ಲಿ ತರುಣ್ ಸ್ಡುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಈ ಸಿನಿಮಾಗೆ ಅರವಿಂದ್ ಕೌಶಿಕ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. 


ಇನ್ನೂ ನಟ ಉಪೇಂದ್ರ ಹಾಗೂ ಆರಾಧನಾಗೂ ವಯಸ್ಸಿನಲ್ಲಿ ಬಹಳ ಅಂತರವಿದ್ದು, ಜೋಡಿ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬ ಕುತೂಹಲ ಮೂಡಿದೆ. 

ಈ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡ, ಸಿನಿಮಾ ಕಥೆಯಲ್ಲಿ ಇಬ್ಬರ ವಯಸ್ಸಿಗೂ ನ್ಯಾಯ ಕೊಡುವ ಪಾತ್ರ ಹೆಣೆಯಲಾಗಿದ್ದು ಸಿನಿಮಾ ನೋಡಿದ ಬಳಿಕ ಅದರ ರಹಸ್ಯ ತಿಳಿಯಲಿದೆ ಎಂದಿದೆ.

ನೆಕ್ಸ್ಟ್‌ ಲೆವೆಲ್ ಈ ಚಿತ್ರದ ಶೂಟಿಂಗ್‌ ಇದೇ ಬರುವ ನವೆಂಬರ್‌ನಿಂದ ಪ್ರಾರಂಭವಾಗಲಿದ್ದು ಸದ್ಯಕ್ಕೆ ಪ್ರೀಪ್ರೊಡಕ್ಷನ್ ತಯಾರಿ ನಡೆಯುತ್ತಿದೆ. ಕಾಟೇರ ಚಿತ್ರದ ಬಳಿಕ ಆ ಪಾತ್ರಕ್ಕಿಂತ ಭಿನ್ನ ಕ್ಯಾರೆಕ್ಟರ್ ಹುಡುಕುತ್ತಿದ್ದ ನಟಿ ಆರಾಧನಾ ಅಪ್ರೋಚ್ ಆಗಿದ್ದ ಬೇರೆಲ್ಲಾ ಆಫರ್‌ಗಳನ್ನ ಫಿಲ್ಟರ್ ಮಾಡಿ ನೆಕ್ಸ್ಟ್‌ ಲೆವೆಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ