Actor Upendra: ಪತ್ನಿ ಮಕ್ಕಳೊಂದಿಗೆ ಮಂತ್ರಾಲಯಕ್ಕೆ ತೆರಳಿದ ಉಪೇಂದ್ರ, ರಥ ಎಳೆದು ಹರಕೆ ತೀರಿಸಿದ ರಿಯಲ್ ಸ್ಟಾರ್‌

Sampriya

ಸೋಮವಾರ, 12 ಮೇ 2025 (14:50 IST)
Photo Credit X
ನಟ ಉಪೇಂದ್ರ ಅವರು ತಮ್ಮ ಕುಟುಂಬ ಸಮೇತ ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಪ್ರಿಯಾಂಕಾ ಹಾಗೂ ಮಕ್ಕಳು ಸೇರಿ ಕುಟುಂಬ ಸಮೇತರಾಗಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಟ ರಜತ ಗಜವಾಹನೋತ್ಸವದಲ್ಲಿ ಭಾಗಿಯಾಗಿದ್ದಾರೆ. ರಥವನ್ನ ಎಳೆದು ಉಪೇಂದ್ರ ಕುಟುಂಬ ಹರಕೆ ತೀರಿಸಿದೆ.

ಈ ಕುಟುಂಬದ ಜತೆಗೆ ಹಿರಿಯ ನಟಿ ತಾರಾ ವೇಣು ದಂಪತಿ ಕೂಡಾ ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಮಂಚಾಲಮ್ಮ ದೇವಿ ಹಾಗೂ ರಾಯರ ವೃಂದಾವನ ದರ್ಶನ ಪಡೆದರು. ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಉಪೇಂದ್ರ ಹಾಗೂ ತಾರಾ ಕುಟುಂಬಗಳ ಸದಸ್ಯರಿಗೆ ಆಶೀರ್ವಚನ ನೀಡಿ ಸನ್ಮಾನಿಸಿದರು. ಫಲಮಂತ್ರಾಕ್ಷತೆ, ಶೇಷವಸ್ತ್ರ ನೀಡಿ ಆಶೀರ್ವದಿಸಿದರು.

ಸದ್ಯ ಉಪೇಂದ್ರ ಅವರ ಕೈಯಲ್ಲಿ 45 ಸಿನಿಮಾ, ಭಾರ್ಗವ, ತಲೈವಾ ಜೊತೆಗಿನ ‘ಕೂಲಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ