ಮುಸ್ಲಿಂ ಯುವಕನನ್ನು ಮದುವೆಯಾಗಲು ಮತಾಂತರವಾಗಬೇಡಿ: ಮಾಳವಿಕಾ ಅವಿನಾಶ್

ಸೋಮವಾರ, 4 ಡಿಸೆಂಬರ್ 2023 (11:00 IST)
ಬೆಂಗಳೂರು: ಸ್ಯಾಂಡಲ್ ವುಡ್ ಜನಪ್ರಿಯ ನಟಿ ಮಾಳವಿಕಾ ಅವಿನಾಶ್ ಲವ್ ಜಿಹಾದ್ ಮತ್ತು ಮತಾಂತರದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.

ದ.ಕ. ಜಿಲ್ಲೆಯ ಪುತ್ತೂರಿನ ನಾರಿ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮುಸ್ಲಿಂ ಯುವಕನನ್ನು ಮದುವೆಯಾಗಲು ಮತಾಂತರವಾಗಬೇಡಿ ಎಂದು ಹಿಂದೂ ಯುವತಿಯರಿಗೆ ಕಿವಿ ಮಾತು ಹೇಳಿದ್ದಾರೆ.

ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ಮದುವೆಯಾಗುವೆ ಎನ್ನುವುದು ನಿಜವಾದ ಪ್ರೀತಿಯಲ್ಲ.ವಿವಿಧ ಆಸೆ, ಆಮಿಷಗಳಿಗೆ ಬಲಿಯಾಗಿ ಯುವತಿಯರು ಧರ್ಮ ತೊರೆಯುತ್ತಿದ್ದಾರೆ. ತಮ್ಮ ಧರ್ಮ ತೊರೆದು ಅನ್ಯಧರ್ಮದ ಕಟ್ಟಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಕುರಿತು ಚಿಂತನೆ ನಡೆಸಬೇಕು’ ಎಂದಿದ್ದಾರೆ.

ಅಷ್ಟೇಲ್ಲ, ಹಿಂದೂ ಧರ್ಮದಲ್ಲಿ ಏಕ ಪತ್ನಿ ವ್ಯವಸ್ಥೆಯಿದೆ. ಆದರೆ ಅಲ್ಲಿ ಬಹುಪತ್ನಿತ್ವವಿದೆ. ಅನ್ಯ ಕೋಮಿನ ಯುವಕನನ್ನು ಮದುವೆಯಾಗುವ ಯುವತಿ ಕೊನೆಗೆ ಬಹುಪತ್ನಿಯರಲ್ಲಿ ಒಬ್ಬರಾಗಿ ಬದುಕುವ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ