ಗಣೇಶ ಹಬ್ಬ ಇಂದಾ? ನಾಳೆಯಾ? ಕನ್ ಫ್ಯೂಷನ್ ಬೇಡ

ಸೋಮವಾರ, 18 ಸೆಪ್ಟಂಬರ್ 2023 (08:40 IST)
ಬೆಂಗಳೂರು: ಈ ಬಾರಿ ಗಣೇಶ ಹಬ್ಬ ಯಾವಾಗ ಎನ್ನುವ ಗೊಂದಲ ಅನೇಕರಲ್ಲಿದೆ. ಇಂದು ಗೌರಿ ಗಣೇಶ ಹಬ್ಬ ಎರಡೂ ಒಂದೇ ದಿನ ಬರುತ್ತಿದೆ ಎಂದು ಅನೇಕರು ಅಂದುಕೊಂಡಿದ್ದಾರೆ. ಮತ್ತೆ ಕೆಲವರು ನಾಳೆಯೇ ಗಣೇಶ ಹಬ್ಬ ಎನ್ನುತ್ತಿದ್ದಾರೆ.

ಚೌತಿ ತಿಥಿ ಬೆಳಗ್ಗೆ ಮತ್ತು ಅಪರಾಹ್ನದ ಅವಧಿಯಲ್ಲಿ ಬರುವ ದಿನವನ್ನು ಚೌತಿ ಹಬ್ಬವಾಗಿ ಆಚರಿಸುತ್ತಾರೆ. ಆದರೆ ಇಂದು ಚೌತಿ ತಿಥಿ ಆರಂಭವಾಗಿ ನಾಳೆಯವರೆಗೆ ಇರುತ್ತದೆ. ಇಂದು ಅಪರಾಹ್ನದ 12.39 ರ ಬಳಿಕವಷ್ಟೇ ಚೌತಿ ತಿಥಿ ಆರಂಭವಾಗುತ್ತದೆ.

ಹೀಗಾಗಿ ನಾಳೆಯೇ ಗಣೇಶ ಹಬ್ಬದ ಆಚರಣೆಗೆ ಸೂಕ್ತ ದಿನ. ಇಂದು ಚೌತಿ ತಿಥಿ ಆರಂಭವಾಗುವ ಕಾರಣಕ್ಕೆ ಕೆಲವು ಕಡೆ ಇಂದಿನಿಂದಲೇ ಹಬ್ಬದ ಆಚರಣೆ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ