ಕೆಜಿಎಫ್ 2 ಗೆ ಡಬ್ಬಿಂಗ್ ಮಾಡಿದ ಮಾಳವಿಕಾ ಅವಿನಾಶ್

ಗುರುವಾರ, 17 ಜೂನ್ 2021 (10:45 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೀಗ ಲಾಕ್ ಡೌನ್ ಬಳಿಕ ಮತ್ತೆ ಚಿತ್ರರಂಗದ ಕೆಲಸಗಳು ಶುರುವಾಗಿದೆ.

 

ನಟಿ ಮಾಳವಿಕಾ ಅವಿನಾಶ್ ಲಾಕ್ ಡೌನ್ ಬಳಿಕ ಮತ್ತೆ ಕೆಲಸಕ್ಕೆ ಮರಳಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕೆಜಿಎಫ್ 2 ಸಿನಿಮಾಗೆ ಡಬ್ಬಿಂಗ್ ಆರಂಭಿಸಿರುವುದಾಗಿ ಹೇಳಿದ್ದಾರೆ. 50 ದಿನಗಳ ನಂತರ ಮತ್ತೆ ಕೆಲಸಕ್ಕೆ ಮರಳುವುದಾಗಿ ಹೇಳಿದ್ದಾರೆ.

ಇನ್ನು, ಕೆಜಿಎಫ್ 2 ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗುವುದಾಗಿ ಈ ಮೊದಲು ಘೋಷಣೆಯಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಘೋಷಣೆಯಾದ ದಿನಾಂಕಕ್ಕೆ ಸಿನಿಮಾ ಬಿಡುಗಡೆಯಾಗಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ