ಅಮೆರಿಕಾ ಅಮೆರಿಕಾಗೆ 25 ವರ್ಷ: ಹಳೆಯ ನೆನಪಿಗೆ ಜಾರಿದ ರಮೇಶ್, ನಾಗತಿಹಳ್ಳಿ

ಬುಧವಾರ, 16 ಜೂನ್ 2021 (11:12 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ 90 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ‘ಅಮೆರಿಕಾ ಅಮೆರಿಕಾ’ ಸಿನಿಮಾಗೆ ಇಂದಿಗೆ 25 ವರ್ಷ. ಈ ವಿಶೇಷ ದಿನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾಯಕ ನಟ ರಮೇಶ್ ಅರವಿಂದ್ ಸ್ಮರಿಸಿಕೊಂಡಿದ್ದಾರೆ.


ಅಮೆರಿಕಾ ಅಮೆರಿಕಾ ಸಿನಿಮಾದ ಹಾಡುಗಳು ಇಂದಿಗೂ ಹಿಟ್. ರಾಜೇಶ್ ಕೃಷ್ಣ ಧ್ವನಿಯಲ್ಲಿ ನೂರು ಜನ್ಮಕೂ ಹಾಡು ಇಂದಿನ ಜನರೇಷನ್ ನವರಿಗೂ ಫೇವರಿಟ್ ಹಾಡು. ರಮೇಶ್ ಅರವಿಂದ್-ಹೇಮಾ ಪಂಚಮುಖಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾದ ಹೆಚ್ಚಿನ ಭಾಗ ಅಮೆರಿಕಾದಲ್ಲೇ ಚಿತ್ರೀಕರಣವಾಗಿತ್ತು. ಪಕ್ಕಾ ನಾಗತಿಹಳ್ಳಿ ಚಂದ್ರಶೇಖರ್ ಅಭಿರುಚಿಯ ಸಿನಿಮಾ ಇದಾಗಿತ್ತು.

ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾ ಚಿತ್ರೀಕರಣದ ಮೊದಲ ದಿನದ ಫೋಟೋ ಹಾಕಿಕೊಂಡರೆ, ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಈ ಸಿನಿಮಾ ಮಾಡಿದ ಹೆಗ್ಗಳಿಕೆಗಳ ವಿಡಿಯೋವೊಂದನ್ನು ಹಾಕಿ ಇದೊಂದು ಸುಂದರ ನೆನಪು ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ