ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಡಿ ಸಂಕಷ್ಟ

ಶನಿವಾರ, 14 ಮೇ 2022 (18:14 IST)
ಕೊಚ್ಚಿ: ತನ್ನ ಆಪ್ತನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಉದ್ಯಮಿ ಮಾನ್ಸನ್ ಮಾವುಂಗಾಲ್ ಎಂಬಾತ ಮೋಹನ್‍ ಲಾಲ್ ಗೆ ಆಪ್ತರಾಗಿದ್ದರು. ಈತ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದು, ವಿಚಾರಣೆ ನಡೆಯುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಸನ್ ಗೆ ಆಪ್ತರಾಗಿದ್ದವರಿಗೆ ವಿಚಾರಣೆಗೆ ಹಾಜರಾಗಲು ಇಡಿ ನೋಟಿಸ್ ನೀಡಿದೆ. ಈ ಪಟ್ಟಿಯಲ್ಲಿ ಮೋಹನ್ ಲಾಲ್ ಹೆಸರೂ ಸೇರಿಕೊಂಡಿದೆ. ಹೀಗಾಗಿ ಸ್ಟಾರ್ ನಟನಿಗೆ ಸಂಕಷ್ಟ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ