ಮುಮ್ತಾಜ್ ರಿಲೀಸ್ ಗೆ ರೆಡಿ

ಬುಧವಾರ, 2 ಸೆಪ್ಟಂಬರ್ 2015 (10:50 IST)
ನವಗ್ರಹದ ಚಾಕಲೇಟ್ ಬಾಯ್ ಧರ್ಮಕೀರ್ತಿರಾಜ್ ಸೋಲೋ ಪಫ್ರರ್ಮೆಸ್ ಇರೋ ಚಿತ್ರ ಮುಮ್ತಾಜ್ ಈಗ ಬಿಡುಗಡೆಗೆ ರೆಡಿಯಾಗಿದೆ. ನವಗ್ರಹ ಸಿನಿಮಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಧರ್ಮಕೀರ್ತಿರಾಜ್ ಇಬ್ಬರು ಒಟ್ಟಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ತಮ್ಮ ಸ್ನೇಹಿತನಿಗಾಗಿ ದರ್ಶನ್ ಮುಮ್ತಾಜ್ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಈ ಹಿಂದೆ ನವಗ್ರಹ ಸಿನಿಮಾದಲ್ಲಿ ಈ ಚಾಕಲೇಟ್ ಹೀರೋಗೆ ಬಿಗ್ ಸ್ಕ್ರೀನ್ ನಲ್ಲಿ ದರ್ಶನ್ ಛಾನ್ಸ್ ಕೊಡಿಸಿದ್ರು.
ಇನ್ನು ಈ ಸಿನಿಮಾದಲ್ಲಿ ಧರ್ಮಕೀರ್ತಿ ಜೊತೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿ ಲೇಡಿ ಸುಲ್ತಾನ್ ರಾಗಿ ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದರ್ಶನ್ ಪಾತ್ರ ವಿಶಿಷ್ಟವಾಗಿದೆ. ಯಾಕಂದ್ರೆ ಇಲ್ಲಿ ಲವ್ ಬ್ರೇಕಪ್ ಆದಾಗ ಹುಡುಗನಿಗೆ ಬುದ್ಧಿ ಹೇಳಿ ಒಡೆದ ಹೃದಯವನ್ನ ಜೋಡಿಸೋ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕ್ಷನ್ ಕಿಂಗ್ ದರ್ಶನ್ ಪ್ರೀತಿಗೋಸ್ಕರ ರೌಡಿಗಳ ಜೊತೆ ಗುದ್ದಾಡೋ ಸೀನ್ ಕೂಡ ಇದೆ.
 
ಮುಮ್ತಾಜ್ ಪ್ರೇಮ್ ಕಹಾನಿಗೆ ಸೂತ್ರಧಾರ ರಾಘವ ಮುರುಳಿ. ಚಿತ್ರಕ್ಕೆ  ಪ್ರವೀಣ್ ಸಂಗಿತ ಸಂಯೋಜನೆ ಮಾಡಿದ್ದು ಈಗಾಗ್ಲೇ ಹಾಡುಗಳು ಮಾರ್ಕೆಟ್ ನಲ್ಲಿ ಸದ್ದು ಮಾಡ್ತಿವೆ. ಇನ್ನು ಸಿನಿಮಾಗೆ ನರಸಿಂಹ ಮೂರ್ತಿಯವ್ರು ಹಣಹೂಡಿದ್ದು ವಿಶಿಷ್ಠ ಸಿನಿಮಾವೊಂದನ್ನ ಪ್ರೇಕ್ಷರೆದುರು ತರಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ