ತಲೆದಿಂಬಿನ ಜೊತೆ ಟೂರ್ ಹೋದ ವ್ಯಕ್ತಿ! ಇದರ ವಿಶೇಷತೆಯೇನು ಗೊತ್ತಾ?!
ಅಸಲಿಗೆ ಈತನ ಪತ್ನಿಯೂ ಪ್ರವಾಸದಲ್ಲಿ ಜೊತೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಲಸದ ಕಾರಣದಿಂದ ಪ್ರವಾಸ ರದ್ದಾಗಿದೆ. ಹೀಗಾಗಿ ಪತ್ನಿಯನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ಕಾರಣಕ್ಕೆ ಆಕೆಯ ಭಾವಚಿತ್ರವಿರುವ ತಲೆದಿಂಬನ್ನು ಜೊತೆಗೆ ಕೊಂಡೊಯ್ದಿದ್ದಾನೆ.
ಇದನ್ನು ಆತ ಫೇಸ್ ಬುಕ್ ನಲ್ಲಿ ಪ್ರಕಟಿಸಿಕೊಂಡಿದ್ದು, ಪತ್ನಿ ಮೇಲಿನ ಆತನ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.