ಕೆ.ಎಸ್.ಆರ್.ಟಿ.ಸಿ. ಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್.. ವಾರಾಂತ್ಯದ ಪ್ರವಾಸ ಪ್ಯಾಕೇಜ್

ಶುಕ್ರವಾರ, 22 ಜುಲೈ 2022 (14:42 IST)
ಬೆಂಗಳೂರು-ಸೋಮನಾಥಪುರ-ತಲಕಾಡು-ಮಧ್ಯರಂಗ-ಭರಚುಕ್ಕಿ-ಗಗನಚುಕ್ಕಿ' ಮಾರ್ಗದಲ್ಲಿ ವಾರಾಂತ್ಯದ ದಿನಗಳಲ್ಲಿ ಪ್ರವಾಸ ಪ್ಯಾಕೇಜ್ ಪ್ರಕಟಿಸಿದೆ.
ಪ್ಯಾಕೇಜ್ ಟೂರ್ ಅನ್ನು ಜು.23ರಿಂದ ಪ್ರಾರಂಬಿಸಲಾಗುತ್ತಿದ್ದು, ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ನಿರ್ಗಮಿಸಿ ಗಗನಚುಕ್ಕಿಗೆ 5.15ಕ್ಕೆ ತಲುಪಲಿದೆ.(ಪ್ರವೇಶ ಶುಲ್ಕ, ಉಪಾಹಾರ, ಮಧ್ಯಾಹ್ನದ/ರಾತ್ರಿ ಊಟವನ್ನು ಹೊರತುಪಡಿಸಿ) ಪ್ಯಾಕೇಜ್ ಟೂರ್ ಪ್ರಯಾಣದರ ವಯಸ್ಕರಿಗೆ 400 ರೂ.ಹಾಗೂ ಮಕ್ಕಳಿಗೆ 250 ರೂ. ನಿಗದಿಪಡಿಸಲಾಗಿದೆ.
 
ನಿಗಮದ ಮುಂಗಡ ಟಿಕೇಟ್ ಬುಕ್ಕಿಂಗ್ ಕೌಂಟರ್ ಗಳಲ್ಲಿ ಬುಕ್ಕಿಂಗ್ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ 080-26252625/ 7760990287 ಅಥವಾ ವೆಬ್‍ಸೈಟ್ ksrtc.karnataka.gov.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ