ಬೆಂಗಳೂರು: ಬಿಗ್ ಬಾಸ್ ನಲ್ಲಿದ್ದಾಗ ಹತ್ತಿರವಾಗಿದ್ದ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಈಗ ಹೊರಗೆ ಬಂದ ಮೇಲೂ ಅದೇ ಸ್ನೇಹ ಉಳಿಸಿಕೊಂಡಿದ್ದಾರೆ.
ಇಬ್ಬರೂ ಟ್ರೆಡಿಷನಲ್ ಡ್ರೆಸ್ ನಲ್ಲಿ ಜೊತೆಯಾಗಿ ನಿಂತು ಪೋಸ್ ನೀಡಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲರ್ಸ್ ಕನ್ನಡ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ತೆಗೆದ ಫೋಟೋ ಇದಾಗಿದ್ದರೂ ಇದರ ಜೊತೆಗೆ ಇನ್ನೊಂದು ಫೋಟೋದಲ್ಲಿ ದಿವ್ಯಾ ಸುರೇಶ್ ಫ್ಯಾಮಿಲಿ ಜೊತೆ ಮಂಜು ಕೂಡಾ ನಿಂತಿರುವ ಫೋಟೋ ಪ್ರಕಟಿಸಿದ್ದಾರೆ.
ಜೊತೆಗೆ ಇವರು ಮೂವರೂ ನನ್ನ ಹೃದಯಕ್ಕೆ ಹತ್ತಿರವಾದವರು ಎಂದು ದಿವ್ಯಾ ಬರೆದುಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.