ಹೊಸ ಆರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

ಮಂಗಳವಾರ, 13 ಆಗಸ್ಟ್ 2019 (08:53 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಮತ್ತೊಂದು ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಈ ಸಿನಿಮಾದ ಟೈಟಲ್ ‘ಆರಂಭ’.


ಚಿತ್ರದ ಟೀಸರ್ ಆಗಸ್ಟ್ 23 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಸಾಹೇಬ, ಬೃಹಸ್ಪತಿ ಸಿನಿಮಾ ಮಾಡಿರುವ ಇದು ಮನೋರಂಜನ್ ಗೆ ನಾಲ್ಕನೇ ಸಿನಿಮಾ. ಇನ್ನೊಂದು ಸಿನಿಮಾ ಇನ್ನೂ ಸೆಟ್ಟೇರಬೇಕಾಗಿದೆ.

ಈಗಾಗಲೇ ರವಿಚಂದ್ರನ್ ಮತ್ತೊಬ್ಬ ಪುತ್ರ ವಿಕ್ರಮ್ ಅವರ ತ್ರಿವಿಕ್ರಮ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈಗ ಮತ್ತೊಬ್ಬ ಪುತ್ರನ ಸಿನಿಮಾ ಆರಂಭಕ್ಕೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಎಂಬ ಕುತೂಹದಲ್ಲಿ ರವಿಚಂದ್ರನ್ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ