ಕಿಚ್ಚ ಸುದೀಪ್ ಟ್ವೀಟ್ ನಲ್ಲಿ ಟಾಂಗ್ ಕೊಟ್ಟಿದ್ದು ಯಾರಿಗೆ?

ಮಂಗಳವಾರ, 13 ಆಗಸ್ಟ್ 2019 (08:43 IST)
ಬೆಂಗಳೂರು: ಕಿಚ್ಚ ಸುದೀಪ್ ಮಾಡಿರುವ ಎರಡು ಟ್ವೀಟ್ ಗಳು ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಯಾರಿಗೋ ಟಾಂಗ್ ಕೊಟ್ಟಂತೆ ಇರುವ ಈ ಎರಡು ಟ್ವೀಟ್ ಗಳು ಯಾರಿಗೆ ಎಂಬ ಚರ್ಚೆ ಈಗ ಶುರುವಾಗಿದೆ.


ಮೊದಲನೆಯದಾಗಿ ಕಿಚ್ಚ ‘ಗಂಡಸು ಎನಿಸಿಕೊಳ್ಳಲು ಮಧ‍್ಯಪಾನ ಮಾಡಬೇಕಾಗಿಲ್ಲ ಮತ್ತು ಕತ್ತಲಾಗಲು ಕಾಯಬೇಕಾಗಿಲ್ಲ’ ಎಂದು ಟ್ವೀಟ್ ಮಾಡಿದ್ದರು. ಕಿಚ್ಚನ ಈ ಟ್ವೀಟ್ ಸಾಮಾನ್ಯವಾದದ್ದು ಎಂದು ಅಭಿಮಾನಿಗಳೂ ಭಾರೀ ಒಳ್ಳೆ ಮಾತು ಹೇಳಿದಿರಿ ಎಂದು ಕಾಮೆಂಟ್ ಮಾಡಿದರು.

ಆದರೆ ಅದರ ಜತೆಗೆ ಕಿಚ್ಚ ‘ಏನನ್ನೋ ಸಾಧಿಸಲು ನಾನು ಫೈಟ್ ಮಾಡಲ್ಲ. ನನ್ನ ಎದುರಾಳಿ ಫೈಟ್ ಮಾಡಲು ಯೋಗ್ಯನಾದರೆ ಮಾತ್ರ ಫೈಟ್ ಮಾಡುತ್ತೇನೆ’ ಎಂದು ಬರೆದುಕೊಂಡರು. ಮೇಲ್ನೋಟಕ್ಕೆ ಇದು ಪೈಲ್ವಾನ್ ಬಿಡುಗಡೆ ಹಿನ್ನಲೆಯಲ್ಲಿ ಕಿಚ್ಚ ಡೈಲಾಗ್ ಬಿಟ್ಟಿದ್ದು ಎಂದುಕೊಳ್ಳಬಹುದು. ಆದರೆ ಒಳಾರ್ಥದಲ್ಲಿ ಈ ಟ್ವೀಟ್ ಗಳ ಮೂಲಕ ಕಿಚ್ಚ ಯಾರಿಗೋ ಟಾಂಗ್ ಕೊಟ್ಟಿರುವುದು ನಿಜ ಎಂದು ಅರಿವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ