ನೂರು ಜನ್ಮಕ್ಕೂ ರಾಮಚಾರಿಗೆ ನಾನೇ ಹೆಂಡ್ತಿಯೆಂದ 'ಮಾರ್ಗರೇಟ್'

Sampriya

ಸೋಮವಾರ, 12 ಆಗಸ್ಟ್ 2024 (20:53 IST)
Photo Courtesy X
ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ಯೂಟ್ ಜೋಡಿ ಯಶ್ ರಾಧಿಕಾ ಅವರು ಇಂದಿಗೆ ನಿಶ್ಚಿತಾರ್ಥ ಮಾಡಿಕೊಂಡು 8ವರ್ಷಗಳಾಗಿವೆ. ಈ ಬಗ್ಗೆ ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಸ್ಟ್ ಹಂಚಿಕೊಂಡು, ನೂರು ಜನ್ಮದಲ್ಲೂ ಗಂಡನಾಗಿ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆಂದು ಬರೆದುಕೊಂಡಿದ್ದಾರೆ.

8 ವರ್ಷಗಳ ಹಿಂದೆ ಈ ದಿನ ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನಾನು ನೂರು ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡುತ್ತೇನೆ ಎಂದು ನನಗೆ ತಿಳಿದಿತ್ತು ಎಂದು ರಾಧಿಕಾ ರೋಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ಒಟ್ಟಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಾಧಿಕಾ-ಯಶ್ ಅವರು 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ತಮ್ಮ ಸಿನಿ ಬದುಕನ್ನು ಶುರು ಮಾಡಿದರು. ನಂತರ ಈ ಜೋಡಿ 'ಡ್ರಾಮಾ', 'ರಾಮಾಚಾರಿ',  'ಸಂತು ಸ್ಟ್ರೈಟ್ ಫಾರ್ವಡ್' ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ದರು.

ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ 2016ರ ಆ12ರಂದು ಗೋವಾದಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡರು.  ಅದೇ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲವ್‌ ಬರ್ಡ್ಸ್‌ಗೆ ಇದೀಗ ಇಬ್ಬರು ಮಕ್ಕಳಿದ್ದಾರೆ.

ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ಯಶ್ ಅವರು ಇದೀಗ ಟಾಕ್ಸಿಕ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ರಾಧಿಕ ಪಂಡಿತ್ ಅವರು ಸಿನಿಮಾ ರಂಗದಿಂದ ದೂರ ಉಳಿದು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ