ನಟ ಲೂಸ್ ಮಾದಾ ಯೋಗಿಗೆ ಕಂಕಣಬಲ

ಸೋಮವಾರ, 22 ಮೇ 2017 (15:08 IST)
ನಟ ಲೂಸ್ ಮಾದಾ ಯೋಗಿಗೆ ಕಂಕಣಬಲ ಕೂಡಿಬಂದಿದ್ದು ಬಾಲ್ಯದ ಗೆಳತಿ ಸಾಹಿತ್ಯಳನ್ನು ಕೈ ಹಿಡಿಯಲಿದ್ದಾರೆ ಎಂದು ಅವರ ಯೋಗಿ ತಂದೆ ತಿಳಿಸಿದ್ದಾರೆ.
ಜೂನ್ 11 ರಂದು ಲೂಸ್ ಮಾದಾ ಯೋಗಿ ತನ್ನ ಬಾಲ್ಯದ ಗೆಳತಿ ಸಾಹಿತ್ಯ ಅರಸ್‌ರೊಂದಿಗೆ ನಿಶ್ಚಿತಾರ್ಥ ನೇರವೇರಲಿದ್ದು, ನವೆಂಬರ್ 2 ರಂದು ಬೆಂಗಳೂರಿನಲ್ಲಿಯೇ ವಿವಾಹ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ಲೂಸ್ ಮಾದಾ ಯೋಗಿ ಮತ್ತು ಸಾಹಿತ್ಯ ಅರಸ್ 10 ನೇ ತರಗತಿಯಿಂದಲೇ ಪ್ರೇಮದಲ್ಲಿ ಸಿಲುಕಿದ್ದರು ಎನ್ನಲಾಗಿದೆ. ಸಾಹಿತ್ಯ ಅರಸ್ ಎಮ್‌ಎನ್‌ಸಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
 
ಯೋಗಿ ಮತ್ತು ಸಾಹಿತ್ಯರ ವಿವಾಹವನ್ನು ಸರಳ ರೀತಿಯಲ್ಲಿ ನೆರವೇರಿಸಲಾಗುವುದು ಎಂದು ಯೋಗಿ ತಂದೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ