ಸಲ್ಮಾನ್ ನಾನು ಒಳ್ಳೆ ಫ್ರೆಂಡ್ಸ್: ಶಾರುಖ್

ಬುಧವಾರ, 1 ಜುಲೈ 2015 (11:00 IST)
ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅಂದ್ರೆ ಹಾವು ಮುಂಗುಸಿ ಇದ್ದಂತೆ. ಒಬ್ಬರ ಮುಖ ಒಬ್ಬರು ನೋಡಲ್ಲ ಅನ್ನು ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸಲ್ಲು ಹಾಗೂ ಕಿಂಗ್ ಖಾನ್ ಕೂಡ ಒಂದೇ ಕಡೆ ಕಾಣಿಸಿಕೊಳ್ಳುತ್ತಿರಲಿಲ್ಲ. ಸಲ್ಲು ಹೋದೆಡೆ ಶಾರುಖ್ ಇರುತ್ತಿರಲಿಲ್ಲ.  ಶಾರುಖ್ ಇದ್ದಡೆ ಸಲ್ಲು ಕಾಣಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಯಾವಾಗ ಶಾರುಖ್ ಸಲ್ಲು ತಂಗಿ ಅರ್ಪಿತಾ ಖಾನ್ ಮದುವೆಯಲ್ಲಿ ಶಾರುಖ್ ಕಾಣಿಸಿಕೊಂಡ್ರೂ ಪರಿಸ್ಥಿತಿಯೇ ಬದಲಾಗಿ ಹೋಯ್ತು. ಇವರಿಬ್ಬರು ಒಳ್ಳೆ ಫ್ರೆಂಡ್ಸ್ ಅನ್ನೋದನ್ನು ತೋರಿಸಿಕೊಟ್ರು. 
ಆದ್ರೀಗ ಶಾರುಖ್ ಖಾನ್ ಅಭಿಮಾನಿಗಳಿಗೆ ಒಂದು ಸಂತಸ ಸುದ್ದಿ ನೀಡಿದ್ದಾರೆ. ನನ್ನ ಹಾಗೂ ಸಲ್ಮಾನ್ ನಡುವೆ ಯಾವುದೇ ಭಿನ್ನಭಿಪ್ರಾಯಗಳಲ್ಲ. ನಾವಿಬ್ಬರು ಒಳ್ಳೆ ಫ್ರೆಂಡ್ಸ್ ಆಗಿದ್ದೇವೆ ಎಂದಿದ್ದಾರೆ. ಇನ್ನು ಶಾರುಖ್ ಅಭಿನಯ ರಾಯೀಸ್ ಹಾಗೂ ಸಲ್ಲು ಮಿಯಾರ ಸುಲ್ತಾನ್ ಚಿತ್ರ ಬರುವ ವರ್ಷ ಈದ್ ಗೆ ಬಿಡುಗಡೆಯಾಗುತ್ತಿವೆ. ಹಾಗಾಗಿ ಅಭಿಮಾನಿಗಳು ಬಾಕ್ಸಾಫೀಸ್ ನಲ್ಲಿ ಸಲ್ಲು ಹಾಗೂ ಶಾರುಖ್ ಸಿನಿಮಾದ ನಡುವೆ ಕ್ಲ್ಯಾಶ್ ಆಗ್ಬಹುದು ಅಂತಾ ಲೆಕ್ಕಾಚಾರದಲ್ಲಿದ್ರು. ಆದ್ರೆ ಶಾರುಖ್ ಮಾತ್ರ ನಮ್ಮ ಸಿನಿಮಾಗಳ ನಡುವೆ ಆ ರೀತಿ ಆಗೋಲ್ಲ ಅಂತಾ ಹೇಳಿದ್ದಾರೆ. ಇದು ಅವರಿಬ್ಬರ ನಡುವಿನ ಬಾಂಧವ್ಯವೀಗ ಎಷ್ಟು ಗಟ್ಟಿಯಾಗಿದೆ ಅನ್ನೋದನ್ನು ತೋರಿಸುತ್ತಿದೆ.
 
ಇನ್ನು ರಾಯೀಸ್ ಸಿನಿಮಾವನ್ನು ರಾಹುಲ್ ಧೋಲಾಕಿಯಾ ನಿರ್ದೇಶಿಸಿದ್ದು ಪಾಕಿಸ್ತಾನ ಮೂಲದ ನಟಿ ಮಹೀರಾ ಖಾನ್ ಕಿಂಗ್ ಖಾನ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಲ್ಲುರ ಸುಲ್ತಾನ್ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸುತ್ತಿದ್ದಾರೆ. ಇನ್ನು ಈ ಹಿಂದೆಯೂ 2006ರಲ್ಲಿ ಸಲ್ಮಾನ್ ಖಾನ್ ರ ಜಾನ್ ಈ ಮನ್ ಹಾಗೂ ಡಾನ್ ಸಿನಿಮಾ ಕೂಡ ಒಟ್ಟಿಗೆ ರಿಲೀಸ್ ಆಗಿತ್ತು. ಆದ್ರೆ ಡಾನ್ ಸಿನಿಮಾ ಹಿಟ್ ಆಗಿದ್ರೂ  ಸಲ್ಲು ಸಿನಿಮಾ ಅಷ್ಟೊಂದು ಯಶಸ್ವಿ ಕಂಡಿರಲಿಲ್ಲ. ಆದ್ರೀಗ ಮತ್ತೆ ಇಬ್ಬರ ಸಿನಿಮಾ ಎದುರು ಬದುರಾಗುತ್ತಿದ್ದು ಅಭಿಮಾನಿಗಳಲ್ಲಿ ಕುತೂಹಲ ಜೋರಾಗಿದೆ. 

ವೆಬ್ದುನಿಯಾವನ್ನು ಓದಿ