ಹಸೆಮಣೆ ಏರುವ ಮುನ್ನ ಸೆಕ್ಸ್ ಬೇಕೇ ಬೇಡವೇ ಎಂಬ ನಿರ್ಧಾರ ನನ್ನದೇ: ದೀಪಿಕಾ

ಮಂಗಳವಾರ, 31 ಮಾರ್ಚ್ 2015 (10:15 IST)
ಮಹಿಳೆಯರ ಮೇಲೆ ನಡೆಯುವ ಹಿಂಸೆ ಇಂದು ನಿನ್ನೆಯದಲ್ಲ. ಆದರೆ ಅತ್ಯಾಚಾರದಂತಹ ಹೇಯ ಕೃತ್ಯಗಳು ನಿಲ್ಲದೆ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿದಿನ ಆಕೆಯ  ಮೇಲೆ ನಡೆಯುವ ಹಿಂಸೆಯ ಬಗ್ಗೆ ಯಾವುದೋ ಒಂದು ರೂಪದಲ್ಲಿ ನಾವು ಓದುತ್ತಲೇ ಇರುತ್ತೇವೆ. ಅಂತಹ ಅನ್ಯಾಯಗಳ   ವಿರುದ್ಧ  ಹೋರಾಡುವವ ಮಹಿಳೆಯರು ಭಾರತದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.
ದೀಪಿಕಾ ಪಡುಕೋಣೆಯ ಮೈ ಚಾಯ್ಸ್ ವೀಡಿಯೋ ಈಗ ಬಹಳ ಗದ್ದಲ ಮಾಡುತ್ತಿದೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದಾಳಿ, ಅನ್ಯಾಯ, ಆಕೆಯ ಸ್ಥಾನಮಾನ, ಅವಳ ಸ್ವಾತಂತ್ರಕ್ಕೆ ಅಡ್ಡಿಯಾದ ಭಾರತೀಯ ಸಮಾಜ ಹೀಗೆ ಹತ್ತು ಹಲವಾರು ಸಂಗತಿಗಳ ಬಗ್ಗೆ ಪ್ರಶ್ನೆ ಮಾಡುತ್ತಾ ಈಗ ಈ ವೀಡಿಯೋ ಮುಂದುವರೆಯುತ್ತದೆ. ಮಹಿಳೆಗೆ ಇರುವ ಸ್ವಾತಂತ್ರ ಭಾವನೆಗಳಿಗೆ ಅಡ್ಡಿ ಮಾಡುವ ಅಂಶಗಳನ್ನು ಮುಂದೆ ಇಟ್ಟು ಒಂದು ಶಾರ್ಟ್ ಫಿಲಿಂನ್ನು ಬಾಲಿವುಡ್‌ಗೆ ಸೇರಿದ ಹೋಮಿ ಅಡಜನಿಯ ನಿರ್ಮಿಸಿದ್ದಾರೆ. ಓರ್ವ ಮಹಿಳೆ ನಮ್ಮ ಶರೀರ ನಮ್ಮ ಬುದ್ಧಿ ನಮ್ಮ ಇಷ್ಟ ಎಂದು ಹೇಳುತ್ತಾ ಸಾಗುವ ಆ ವೀಡಿಯೋದಲ್ಲಿ ಸ್ತ್ರೀಯರ ಮಾರ್ಪಾಟುಗಳನ್ನು ತೋರುತ್ತಾ ಸಾಗುತ್ತದೆ. ಸುಮಾರು 99 ಮಹಿಳೆಯರು ಈ ವಿಡಿಯೊ ಭಾಗವಾಗಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ಅತ್ಯಾಚಾರದ ಬಗ್ಗೆ ತಿಳಿಸುತ್ತಾ ಮಹಿಳೆಗೆ ಮಹಿಳಾ ಸ್ವಾತಂತ್ರ ಸಮಾಜದ ಬಗ್ಗೆ ಒಂದು ಉತ್ತಮವಾದ  ಸಂದೇಶ ನೀಡಿದ್ದಾರೆ ಇದರಲ್ಲಿ. ಇದು ಮಹಿಳಾ ಶಕ್ತಿ ಮತ್ತು ಮಹಿಳೆಯರಿಗೆ ಅರ್ಪಣೆ ಎನ್ನಲಾಗಿದೆ. 
 
ಮಹಿಳೆಯರು ಧರಿಸುವ ಉಡುಪಿನಿಂದ ಈಗ ಅತ್ಯಾಚಾರಗಳು ನಡೆಯುತ್ತಿವೆ ಎಂದು ಇತ್ತೀಚಿಗೆ ರಾಜಕೀಯ ನಾಯಕರು ಹೇಳಿದ್ದರು. ಅದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ ಮಹಿಳೆಯರು ಈ ವೀಡಿಯೋ ಮೂಲಕ.ನಾನು ಹೇಗೆ ಜೀವಿಸಬೇಕು, ಯಾವ ರೀತಿಯ ಉಡುಗೆ ತೊಡ ಬೇಕು, ನನ್ನ ಶರೀರ ನನ್ನ ಇಷ್ಟ ಅದು ನನ್ನ ಇಷ್ಟದಂತೆ ನಡೆಯುತ್ತದೆ. ಮದುವೆಗೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ  ತೊಡಗಬೇಕೋ ಅಥವಾ ಮದುವೆ ನಂತರ ತೊದಾಗ ಬೇಕೋ ಎನ್ನುವ ನಿರ್ಧಾರ ಕೈಗೊಳ್ಳುವ ಸಂಪೂರ್ಣವಾದ ನಿರ್ಧಾರ ನನ್ನದೇ ಆಗಿದೆ.ನನ್ನ ಮದುವೆ ನನಗೆ ಇಷ್ಟ ಬಂದಂತೆ ನಡೆಯ ಬೇಕು. ನನ್ನ ಬದುಕು ಪುರುಷರ ಜೊತೆ ಹಂಚಿಕೊಳ್ಳ ಬೇಕಾ ಅಥವಾ ಸ್ತ್ರೀ ಜೊತೆ ಹಂಚಿ ಕೊಳ್ಳ ಬೇಕಾ ಎನ್ನುವ ನಿರ್ಧಾರ ಸಂಪೂರ್ಣ ನನ್ನದೇ ಎಂದಿರುವ ದೀಪಿಕಾ ಮಾತುಗಳು ಈಗ ಬಹಳಷ್ಟು ಸದ್ದು ಮಾಡುತ್ತಿವೆ. 
 

ವೆಬ್ದುನಿಯಾವನ್ನು ಓದಿ